ಕೊಕ್ಕಡ ಉಪ್ಪಾರಪಳಿಕೆ ಸಮೀಪ ಬಳ್ಳಿಪ್ಪಗುಡ್ಡೆ ಎಂಬಲ್ಲಿ ಮನೆ ದರೋಡೆ

ಶೇರ್ ಮಾಡಿ

ನೇಸರ ಜ.14: ಕೊಕ್ಕಡ ಉಪ್ಪಾರಪಳಿಕೆ ಸಮೀಪ ಬಳ್ಳಿಪ್ಪಗುಡ್ಡೆ ಎಂಬಲ್ಲಿ ಜ.13ರ ಮಧ್ಯಾಹ್ನ ಸುಮಾರು 2.30ಯಿಂದ 4.00 ಗಂಟೆಯ ನಡುವೆ ಘಟನೆ ನಡೆದಿದೆ.ಮನೆ ಮಾಲಿಕ ಅಶೋಕ ಎಂಬವರು ಆಟೋ ರಿಕ್ಷಾ ಚಾಲಕರಾಗಿದ್ದು,ಅವರು ತುರ್ತು ಕೆಲಸದ ಮೇರೆಗೆ ಆಟೋ ರಿಕ್ಷಾವನ್ನು ಉಪ್ಪಾರಪಳಿಕೆಯಲ್ಲಿ ನಿಲ್ಲಿಸಿ, ಮನೆಯ ಹಾಗೂ ಆಟೋ ರಿಕ್ಷಾದ ಕೀ ಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ತೆರಳುತ್ತಾರೆ,ಅವರ ಪತ್ನಿ ಉಪ್ಪಾರಪಳಿಕೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು,ಎಂದಿನಂತೆ ಬೆಳಗ್ಗೆ ಇವರು ಶಾಲೆಗೆ ಮಗುವಿನೊಂದಿಗೆ ತೆರೆಳಿರುತ್ತಾರೆ,
ಇದನ್ನು ಗಮನಿಸಿದ ಯಾರೂ ರಿಕ್ಷಾದಲ್ಲಿ ಇದ್ದ ಕೀ ಯನ್ನು ಕೊಂಡುಹೋಗಿ, ಮನೆಯ ಬೀಗ ತೆಗೆದು ಕಪಾಟಿನಲ್ಲಿದ್ದ 6 ಪವನ್ ನಷ್ಟು ಇದ್ದ ಚಿನ್ನದ ಕರಿಯಮಣಿ ಸರ, ಮಗುವಿನ ಸರ,ಕಿವಿಯ ಓಲೆ,ಉಂಗುರ ಕಳವುಗೈದು,ಮನೆಗೆ ಬೀಗ ಹಾಕಿ ತೆರಳಿದ್ದಾರೆ.
ಸಂಜೆ ಶಾಲೆಯಿಂದ ಮನೆಗೆ ಬಂದ ಅವರ ಪತ್ನಿಗೆ ಯಾವುದೇ ಅನುಮಾನ ಬರಲಿಲ್ಲ, ಮನೆ ಮಾಲೀಕ ಸಂಜೆ ಆಟೋ ರಿಕ್ಷಾ ಬಳಿ ಬಂದು ನೋಡಿದಾಗ ಕೀ ಇರಲಿಲ್ಲ.ಆಟೋ ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಮನೆಗೆ ತೆರಳಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಮಂಗಳೂರಿಂದ ಶ್ವಾನ ದಳದವರು ಇಂದು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

Leave a Reply

error: Content is protected !!