ಕೇಂದ್ರ ಕಾರಾಗೃಹದ ಆಂಬ್ಯುಲೆನ್ಸ್‌ನಲ್ಲೇ ಖೈದಿಯೊಂದಿಗೆ ಮದ್ಯ ಸೇವಿಸಿದ ಪೊಲೀಸರು

ಶೇರ್ ಮಾಡಿ

ಕೇಂದ್ರ ಕಾರಾಗೃಹದ ಅಂಬ್ಯುಲೆನ್ಸ್ ನಲ್ಲಿ ಇಬ್ಬರು ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಗಳು ಖೈದಿಯೊಂದಿಗೆ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪಂಜಾಬ್‌ನ ಹೋಶಿಯಾರ್‌ಪುರ ಕೇಂದ್ರ ಕಾರಾಗೃಹಕ್ಕೆ ಸೇರಿದ ಆಂಬ್ಯುಲೆನ್ಸ್‌ ಇದಾಗಿದ್ದು ಇಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಕೆಂಪು ಟಿ ಶರ್ಟ್ ಧರಿಸಿದ್ದ ಖೈದಿ ಸೇರಿ ಮದ್ಯ ಸೇವಿಸುತ್ತಿರುವುದು ಕಾಣಬಹುದು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಕುರಿತು ಎಲ್ಲೆಡೆ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹವೂ ಹೆಚ್ಚಾಗತೊಡಗಿದೆ.
ಈ ಹಿಂದೆಯೂ ಘಟನೆ ನಡೆದಿತ್ತು
ಇದೆ ರೀತಿಯ ಘಟನೆ ಒಡಿಶಾದ ತಿರ್ಟೋಲ್ ಪ್ರದೇಶದಲ್ಲಿ ಈ ಹಿಂದೆಯೂ ನಡೆದಿತ್ತು ಎನ್ನಲಾಗಿದ್ದು ರೋಗಿಯೊಬ್ಬರನ್ನು ತಪಾಸಣೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ಚಾಲಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಮದ್ಯ ಸೇವಿಸಿದ ಘಟನೆ ನಡೆದಿತ್ತು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಂಬುಲೆನ್ಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

Leave a Reply

error: Content is protected !!