ನೀರಿನ ಬಕೆಟ್‌ಗೆ ಬಿದ್ದು 1ವರ್ಷ 8 ತಿಂಗಳ ಮಗು ಮೃತ್ಯು

ಶೇರ್ ಮಾಡಿ

ಮಂಗಳೂರು: ನಗರದ ಕಾವೂರಿನಲ್ಲಿ ಬುಧವಾರ ಆಕಸ್ಮಿಕವಾಗಿ ನೀರು ತುಂಬಿದ ಬಕೆಟ್‌ಗೆ ಬಿದ್ದು 1ವರ್ಷ 8 ತಿಂಗಳಿನ ಮಗು ಪ್ರಾಣ ಕಳೆದುಕೊಂಡಿದೆ.
ದುರ್ದೈವಿ ಮಗು ಆಯಿಷಾ ಆಗಿದ್ದು, ಜಾರ್ಖಂಡ್ ವಲಸೆ ಕಾರ್ಮಿಕ ಫಿರೋಜ್ ಅನ್ಸಾರಿ ಅವರ ಮಗಳು. ಕಾವೂರು ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ಅನ್ಸಾರಿ ಕುಟುಂಬ ವಾಸವಾಗಿತ್ತು.
ವರದಿಗಳ ಪ್ರಕಾರ, ಬುಧವಾರ ಸಂಜೆ, ಆಯಿಷಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರು ತುಂಬಿದ ಬಕೆಟ್‌ಗೆ ಬಿದ್ದಿದ್ದಾಳೆ. ಸುತ್ತಮುತ್ತಲಿನವರು ತತ್ ಕ್ಷಣ ಸ್ಪಂದಿಸಿದರೂ ಉಸಿರುಗಟ್ಟಿ ಆಯಿಷಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

error: Content is protected !!