ನೆಲ್ಯಾಡಿ: “ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ ಹಾಗೂ ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ” ಇದರ ವತಿಯಿಂದ ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನೆಲ್ಯಾಡಿ ಹೋಟೆಲ್ ಸುಬ್ರಹ್ಮಣ್ಯ ವಿಲಾಸದ ಮಾಲಕರಾದ ಸುಬ್ರಹ್ಮಣ್ಯ ಆಚಾರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದರಾದ ಗುಡ್ಡಪ್ಪ ಬಲ್ಯ ವಹಿಸಿದ್ದರು. ಶಗ್ರಿತ್ತಾಯ ಅವರ ಪುತ್ರರಾದ ಸುಬ್ರಹ್ಮಣ್ಯ ಶಗ್ರಿತ್ತಾಯ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು, ಯಕ್ಷಗಾನ ಗುರುಗಳಾದ ಯೋಗೀಶ್ ಶರ್ಮ ಆಳದಂಗಡಿ, ಮುಖ್ಯಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಶಗ್ರಿತ್ತಾಯ ಅವರ ಪುತ್ರರಾದ ಗುರುಮೂರ್ತಿ ಶಗ್ರಿತ್ತಾಯ, ಯಕ್ಷಗಾನ ಕಲಾವಿದರು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಯಕ್ಷಗಾನ ಕಲಾವಿದರಾದ ರಮೇಶ್ ಗೌಡ ನಾಲ್ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಗುರುಗಳಾದಯೋಗೀಶ್ ಶರ್ಮ ಆಳದಂಗಡಿ, ಸುಬ್ರಹ್ಮಣ್ಯ ಶಗ್ರಿತ್ತಾಯ ಹಾಗೂ ಗುರುಮೂರ್ತಿ ಶಗ್ರಿತ್ತಾಯ ಇವರು ರಂಗಗೀತೆ ಹಾಗೂ ಚೆಂಡೆಯೊಂದಿಗೆ ಸಾಂಕೇತಿಕವಾಗಿ ತರಬೇತಿಗೆ ಚಾಲನೆ ನೀಡಿದರು. ಬಳಿಕ ಗುರುಗಳಾದ ಯೋಗೀಶ್ ಶರ್ಮ ಇವರಿಂದ ತರಗತಿ ನಡೆಯಿತು.
ವಿದ್ಯಾರ್ಥಿನಿಯರಾದ ಮೆಲಿಷ, ಆಜ್ಞಾ, ಅನ್ವಿ, ಧೃತಿ, ಐಶ್ವರ್ಯ ಪ್ರಾರ್ಥಿಸಿದರು. ಸಹಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಕೆ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು. ಶಾಲೆಯ ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.