ಪ್ರಿಯಕರನ ಭೇಟಿಗೆ ಊರಿನ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಿದ ಪ್ರಿಯತಮೆ..!! ಮುಂದೆ ಆದದ್ದು..

ಶೇರ್ ಮಾಡಿ

ಪ್ರಿಯಕರನನ್ನು ಭೇಟಿಯಾಗಲು ಯುವತಿಯೊಬ್ಬಳು ಇಡೀ ಗ್ರಾಮದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಿಯಕರನನ್ನು ಹಿಡಿದು ಗ್ರಾಮಸ್ಥರು ಥಳಿಸಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ ನಡೆದಿದೆ.
ಬಿಹಾರದ ಬೆಟ್ಟಯ್ಯ ಗ್ರಾಮದ ಪ್ರೀತಿ ಎನ್ನುವ ಯುವತಿ ರಾಜ್‌ ಕುಮಾರ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪರಸ್ಪರ ಭೇಟಿಯಾಗಲು ಆಗುತ್ತಿರಲಿಲ್ಲ. ಈ ಕಾರಣದಿಂದ ಯುವತಿ ಪ್ರೀತಿ ತನ್ನ ಪ್ರಿಯಕರ ರಾಜ್‌ಕುಮಾರ್‌ ನನ್ನು ಭೇಟಿ ಆಗಲು ರಾತ್ರಿಯ ವೇಳೆ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಪ್ಲ್ಯಾನ್‌ ಮಾಡಿ, ಪ್ರಿಯಕರನನ್ನು ಭೇಟಿ ಆಗಲು ಶುರು ಮಾಡಿದ್ದಾಳೆ.
ಪ್ರತಿದಿನ ರಾತ್ರಿ ಕರೆಂಟ್‌ ಹೋಗುತ್ತಿದ್ದರಿಂದ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ. ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ಕಳ್ಳತನ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೂ ದೂರು ನೀಡಿದ್ದಾರೆ. ಆದರೆ ಹೀಗೆ ಯಾಕೆ ಆಗುತ್ತಿದೆ ಎನ್ನುವುದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಮತ್ತೊಂದು ದಿನ ರಾತ್ರಿ ಕರೆಂಟ್‌ ಹೋದ ಬಳಿಕ ರಾಜ್‌ ಕುಮಾರ್‌ ಹಾಗೂ ಪ್ರೀತಿಯನ್ನು ರೆಡ್‌ ಹ್ಯಾಂಡ್‌ ಆಗಿ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಪ್ರೀತಿಯ ವಿದ್ಯುತ್ ಕಡಿತಗೊಳಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇತ್ತ ಗ್ರಾಮಸ್ಥರು ಯುವಕನನ್ನು ಹಿಡಿದು ಥಳಿಸಿದ್ದಾರೆ. ಆದರೆ ಈ ವೇಳೆ ಪ್ರಿಯತಮೆ ಪ್ರೀತಿ ಅಡ್ಡಬಂದಿದ್ದಾಳೆ.
ಇದಾದ ಬಳಿಕ ಗ್ರಾಮಸ್ಥರು ಇಬ್ಬರನ್ನು ಮದುವೆ ಮಾಡಿಸಲು ಹೇಳಿದ್ದು, ಅದರಂತೆ ಊರಿನ ಸಮಸ್ತರ ಮುಂದೆ ದೇವಸ್ಥಾನದಲ್ಲಿ ರಾಜ್‌ ಕುಮಾರ್‌, ಪ್ರೀತಿಯ ವಿವಾಹ ಜರುಗಿದೆ.

Leave a Reply

error: Content is protected !!