‘ತ್ರಿಪುರ ಸುಂದರಿ’ ದಿವ್ಯಾ ಸುರೇಶ್‌ಗೆ ಮುತ್ತು ಕೊಟ್ಟ ಈ ವ್ಯಕ್ತಿ ಯಾರು? ಫೋಟೋ ವೈರಲ್

ಶೇರ್ ಮಾಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಕಥಾನಾಯಕಿ ಆಮ್ರಪಾಲಿ ಪಾತ್ರ ನಿಭಾಯಿಸುತ್ತಿರುವವರು ನಟಿ ದಿವ್ಯಾ ಸುರೇಶ್. ಗಂಧರ್ವ ಲೋಕದ ಕನ್ಯೆಯಾಗಿ ದಿವ್ಯಾ ಸುರೇಶ್ ಕನ್ನಡಿಗರ ಮನೆ ಮಾತಾಗಿದ್ದಾರೆ. ಧಾರಾವಾಹಿಯಲ್ಲಿ ರಾಜಕುಮಾರನನ್ನು ಆಮ್ರಪಾಲಿ ಹುಡುಕುತ್ತಿದ್ದಾಳೆ. ಇತ್ತ ನಿಜ ಜೀವನದಲ್ಲಿ ನಟಿ ದಿವ್ಯಾ ಸುರೇಶ್ ಅವರ ರಾಜಕುಮಾರನ ಬಗ್ಗೆ ಚರ್ಚೆ ಆಗುತ್ತಿದೆ.
ಹೌದು.. ನಟಿ ದಿವ್ಯಾ ಸುರೇಶ್ ಅವರಿಗೆ ಓರ್ವ ವ್ಯಕ್ತಿ ಮುತ್ತು ಕೊಟ್ಟಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ನಟಿ ದಿವ್ಯಾ ಸುರೇಶ್ ಅವರ ಬಾಯ್‌ಫ್ರೆಂಡ್‌ ಇರಬಹುದಾ? ನಟಿ ದಿವ್ಯಾ ಸುರೇಶ್‌ ಪ್ರೀತಿಸುತ್ತಿದ್ದಾರಾ ಅಂತೆಲ್ಲಾ ಅವರ ಫ್ಯಾನ್ ಪೇಜ್‌ಗಳಲ್ಲಿಯೇ ಚರ್ಚೆ ನಡೆಯುತ್ತಿದೆ.
ಅಂದ್ಹಾಗೆ, ಆ ವ್ಯಕ್ತಿಯ ಜೊತೆಗೆ ದಿವ್ಯಾ ಸುರೇಶ್ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಫೋಟೋಗಳು ಕೂಡ ದಿವ್ಯಾ ಸುರೇಶ್ ಅವರ ಫ್ಯಾನ್ ಪೇಜ್‌ಗಳಲ್ಲಿಯೇ ವೈರಲ್ ಆಗಿದ್ದು, ‘ಹೊಸ ಜೋಡಿಗೆ ದೃಷ್ಟಿ ತೆಗೆಯಿರಿ’, ‘ಮುದ್ದಾದ ಜೋಡಿ’, ‘ಕ್ಯೂಟ್ ಕಪಲ್’ ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.
ದಿವ್ಯಾ ಸುರೇಶ್ ಲವ್ ಸ್ಟೋರಿ?
ನಟಿ ದಿವ್ಯಾ ಸುರೇಶ್ ಜೊತೆಗೆ ಆತ್ಮೀಯವಾಗಿರುವ ಆ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು? ಅವರು ಬರೀ ಫ್ರೆಂಡ್ಸ್ ಇರಬಹುದಾ ಅಥವಾ ಪ್ರೀತಿಸುತ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ನಟಿ ದಿವ್ಯಾ ಸುರೇಶ್ ಕೂಡ ಅಧಿಕೃತ ಮಾಹಿತಿ ಕೊಟ್ಟಿಲ್ಲ.
ಮಂಜಣ್ಣನನ್ನ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು
‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ನಟಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೇ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಮಧ್ಯೆ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗಲೇ ಮಂಜು ಪಾವಗಡಗೆ ದಿವ್ಯಾ ಸುರೇಶ್ ಸರ್‌ಪ್ರೈಸ್ ಕೊಟ್ಟಿದ್ದರು. ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದಾಗ, ತಾವೇ ಗೆದ್ದಷ್ಟು ಖುಷಿ ಪಟ್ಟಿದ್ದರು ದಿವ್ಯಾ ಸುರೇಶ್. ‘ಬಿಗ್ ಬಾಸ್’ ಮನೆಯಲ್ಲಿ ಆರಂಭವಾದ ಇವರಿಬ್ಬರ ನಡುವಿನ ಸ್ನೇಹ, ರಿಯಾಲಿಟಿ ಶೋ ಮುಗಿದ್ಮೇಲೂ ಮುಂದುವರೆಯಿತು. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಈಗಲೂ ಬೆಸ್ಟ್ ಫ್ರೆಂಡ್ಸ್. ದಿವ್ಯಾ ಸುರೇಶ್‌ಗೆ ಈಗ ಲೈಫ್‌ ಫಾರ್ಟ್ನರ್‌ ಸಿಕ್ಕಿದ್ದಾರೆ ಎನ್ನುತ್ತಿರುವ ಅಭಿಮಾನಿಗಳು, ಬೆಸ್ಟ್ ಫ್ರೆಂಡ್ ಮಂಜು ಪಾವಗಡ ಅವರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ.
ಸೀರಿಯಲ್‌ಗಳಲ್ಲಿ ‘ಬೆಸ್ಟ್‌ ಫ್ರೆಂಡ್ಸ್’ ಬಿಜಿ
‘ಬಿಗ್ ಬಾಸ್’ ಮನೆಯಿಂದ ಹೊರಬಂದ ಬಳಿಕ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಧಾರಾವಾಹಿಗಳಲ್ಲಿ ಬಿಜಿಯಾಗಿದ್ದಾರೆ. ಅತ್ತ ‘ತ್ರಿಪುರ ಸುಂದರಿ’ ಸೀರಿಯಲ್‌ನಲ್ಲಿ ಗಂಧರ್ವ ಕನ್ಯೆಯಾಗಿ ದಿವ್ಯಾ ಸುರೇಶ್ ನಟಿಸುತ್ತಿದ್ದರೆ, ಇತ್ತ ‘ಅಂತರಪಟ’ ಸೀರಿಯಲ್‌ನಲ್ಲಿ ಆರಾಧನಾಗೆ ಮಾನಸಿಕವಾಗಿ ಹಿಂಸೆ ಕೊಡುವ ಮಲತಂದೆ ಪಾತ್ರದಲ್ಲಿ ಮಂಜು ಪಾವಗಡ ಅಭಿನಯಿಸುತ್ತಿದ್ದಾರೆ.

Leave a Reply

error: Content is protected !!