ನೆಲ್ಯಾಡಿ: ಮಳೆ ಕೊಯ್ಲು ಅಭಿಯಾನ ಮತ್ತು ಯುವಕ-ಯುವತಿ ಮಂಡಲಗಳ ನೋಂದಣಿ ಪತ್ರ ವಿತರಣೆ ಕಾರ್ಯಕ್ರಮ

ಶೇರ್ ಮಾಡಿ

ಸನ್ಮಾನ:
ಸುರೇಶ್.ರೈ ಸೂಡಿಮುಳ್ಳು,ಅಧ್ಯಕ್ಷರು ದ.ಕ ಜಿಲ್ಲಾ ಯುವಜನ ಒಕ್ಕೂಟ(ರಿ )ಮಂಗಳೂರು ಮತ್ತು ಶಿವಪ್ರಸಾದ್.ರೈ ಮೈಲೇರಿ,ಅಧ್ಯಕ್ಷರು ತಾಲೂಕು ಯುವಜನ ಒಕ್ಕೂಟ ಕಡಬರವರಿಗೆ ನೆಲ್ಯಾಡಿ ಗ್ರಾಮ ಪಂಚಾಯತಿನ ವತಿಯಿಂದ ಸನ್ಮಾನಿಸಲಾಯಿತು.

ಫೋಟೋ: ಯತಿ ಸ್ಟುಡಿಯೋ ನೆಲ್ಯಾಡಿ

ನೇಸರ ಜ.14: ನೆಹರು ಯುವ ಕೇಂದ್ರ ಮಂಗಳೂರು,ಕಡಬ ತಾಲೂಕು ಯುವಜನ ಒಕ್ಕೂಟ,ನೆಲ್ಯಾಡಿ ಗ್ರಾಮ ಪಂಚಾಯತ್,ಮಹಿಳಾ ಮತ್ತು ಯುವಕ-ಯುವತಿ ಮಂಡಲಗಳು ನೆಲ್ಯಾಡಿ-ಕೌಕ್ರಾಡಿ,ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮತ್ತು ಜೇಸಿಐ ನೆಲ್ಯಾಡಿ ಇವರ ಸಹಯೋಗದೊಂದಿಗೆ ಮಳೆ ಕೊಯ್ಲು ಅಭಿಯಾನ Cater The Rain Campaign 2020 ಮತ್ತು ಯುವಕ ಯುವತಿ ಮಂಡಲಗಳ ನೋಂದಣಿ ಪತ್ರ ವಿತರಣೆ ಕಾರ್ಯಕ್ರಮವು ನೆಲ್ಯಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ದಿನಾಂಕ 14-01-2022 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಶಿವಪ್ರಸಾದ್.ರೈ ಮೈಲೇರಿ,ಅಧ್ಯಕ್ಷರು ತಾಲೂಕು ಯುವಜನ ಒಕ್ಕೂಟ ಕಡಬ ಇವರು ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಅನೇಕ ಕೆರೆಗಳು ಇದ್ದವು ಆದರೆ ಈಗ ಅಂತ ಕೆರೆಗಳನ್ನು ನಾವು ಮುಚ್ಚುತ್ತಿದ್ದೇವೆ, ಇದರಿಂದ ನೀರು ಇಂಗುವಿಕೆ ಕಡಿಮೆಯಾಗಿ ಸರಾಗವಾಗಿ ಹರಿದು ಹೋಗುವಂತಾಗಿದೆ.ಪಂಚಾಯತ್ ಗಳಲ್ಲಿ ಉದ್ಯೋಗ ಖಾತ್ರಿಯಲ್ಲಿ ಯೋಜನೆಯಲ್ಲಿ ಇಂಗುಗುಂಡಿ ರಚನೆ,ನೀರು ಇಂಗಿಸುವ ಯೋಜನೆ ಇದೆ,ಆದರೆ ನಾವು ಅದರ ಉಪಯೋಗವನ್ನು ಮಾಡುತ್ತಿಲ್ಲ.ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಆಗುವ ಸಾಧ್ಯತೆ ಇದೆ.ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುವುದರಿಂದ ಜನರನ್ನು ಪ್ರೇರೇಪಿಸಲು ಸಾಧ್ಯ ಎಂದು ನುಡಿದರು.ಅಲ್ಲದೆ ನೆಹರು ಯುವಕೇಂದ್ರದ ಅಡಿಯಲ್ಲಿ ಅನೇಕ ಯುವಕ-ಯುವತಿ ಮಂಡಲಗಳು ನೋಂದಣಿಯಾಗಿವೆ.ಅವರ ಪ್ರಮಾಣ ಪತ್ರವನ್ನು ಇಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಡೇವಿಡ್ ಜೈಮಿ ಕೊಕ್ಕಡ, ಸಾಹಿತಿ,ಕೃಷಿಕರು,ಜಲ ಸಂರಕ್ಷಣ ಸಂಶೋಧಕರು ಮಾತನಾಡಿ ನೀರು ಇಂಗ ಬೇಕಾದರೆ ಇಂಗುಗುಂಡಿಗಳ,ಮರಗಿಡಗಳ ಅವಶ್ಯಕತೆ ಇದೆ.ಒಳ್ಳೆಯ ಮನಸ್ಸಿರುವವರು ನೀರನ್ನು ಇಂಗಿಸುವ ಕೆಲಸವನ್ನು ಖಂಡಿತ ಮಾಡುತ್ತಾರೆ,30 ರಿಂದ 40 ವರ್ಷದಿಂದೀಚೆಗೆ ನಾವು ಭೂಮಿಯ ಆಳದಿಂದ ಬೋರ್ ವೆಲ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ತೆಗೆಯುತ್ತಿದ್ದೇವೆ.ಆದರೆ ಭೂಮಿಯ ಆಳಕ್ಕೆ ನೀರಿನ ಇಂಗಿಸುವ ಪ್ರಮಾಣ ಅತಿ ಕಡಿಮೆ ಇದೆ.ಮಳೆಕೊಯ್ಲು ಅಭಿಯಾನ ಇತ್ತೀಚಿನದಲ್ಲ ಕ್ರಿಸ್ತಪೂರ್ವ 3ನೇ ಶತಮಾನದ ಹಿಂದಿನಿಂದಲೂ ಇದೆ,ಈ ಬಗ್ಗೆ ಪುರಾತತ್ವ ಇಲಾಖೆಯಲ್ಲಿ ಮಾಹಿತಿ ಇದೆ.ಒಂದೊಂದು ಮನೆಯ ಮೇಲೆ 4ರಿಂದ 5 ಲಕ್ಷ ಲೀಟರ್ ಮಳೆಯ ನೀರುಗಳು ಬೀಳುತ್ತವೆ ಎಂದರು.ಪರಿಸರವನ್ನು ಸ್ವಚ್ಚವಾಗಿಡಬೇಕು,ಮಳೆ ನೀರನ್ನು ಇಂಗಿಸುವ ಬಗ್ಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.

ಅತಿಥಿಗಳಾದ ಡಾ.ಸದಾನಂದ ಕುಂದರ್,ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ,ಶ್ರೀಮತಿ ಜಯಂತಿ.ಬಿ.ಎಂ, ಅಧ್ಯಕ್ಷರು ನಿಯೋಜಿತ ಜೇಸಿಐ ನೆಲ್ಯಾಡಿ,ಶ್ರೀಮತಿ ಮಂಜುಳಾ ಎನ್, ಅಭಿವೃದ್ಧಿ ಅಧಿಕಾರಿ ನೆಲ್ಯಾಡಿ ಗ್ರಾಮ ಪಂಚಾಯತ್,ರತ್ನಾಕರ ಶೆಟ್ಟಿ ಅಶ್ವಮೇಧ,ಅಧ್ಯಕ್ಷರು ಗೆಳೆಯರ ಬಳಗ ಗಾಂಧಿ ಮೈದಾನ ನೆಲ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು,
ನೋಂದಾವಣೆಗೊಂಡ ಯುವಕ,ಯುವತಿ ಮಂಡಲಗಳಿಗೆ ಸುರೇಶ್.ರೈ ಸೂಡಿಮುಳ್ಳು,ಅಧ್ಯಕ್ಷರು ದ.ಕ ಜಿಲ್ಲಾ ಯುವಜನ ಒಕ್ಕೂಟ(ರಿ )ಮಂಗಳೂರು ಇವರು ಪ್ರಮಾಣಪತ್ರವನ್ನು ವಿತರಿಸಿ, ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಚೇತನಾ ಅಧ್ಯಕ್ಷರು ಗ್ರಾಮ ಪಂಚಾಯತ್ ನೆಲ್ಯಾಡಿ ಇವರು ಮಾತನಾಡಿ ಕಾರ್ಯಕ್ರಮವು ಎಲ್ಲರಿಗೂ ಅನುಕೂಲವಾಗುವಂತದ್ದು,ನಾವೆಲ್ಲರೂ ನೀರನ್ನು ಇಂಗಿಸುವ ಕಾರ್ಯಕ್ಕೆ ಕೈಜೋಡಿಸೋಣ ಎಂದರು ಹಾಗೂ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ನ ಎಲ್ಲಾ ಸದಸ್ಯರುಗಳು,ಸಿಬಂದಿಗಳು,ಗೆಳೆಯರ ಬಳಗ ಗಾಂಧಿ ಮೈದಾನ ನೆಲ್ಯಾಡಿ,ಶ್ರೀ ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು,ಸ್ಕಂದ ಯುವಕ ಮಂಡಲ ದೋಂತಿಲ,ಪ್ರಮುಖಿ ಮಹಿಳಾ ಮಂಡಲ ನೆಲ್ಯಾಡಿ ಕೊಲ್ಯೊಟ್ಟು, ಆದಿಶಕ್ತಿ ಮಹಿಳಾ ಮಂಡಲ ಕೌಕ್ರಾಡಿ, ಸರ್ವಶಕ್ತಿ ಯುವತಿ ಮಂಡಲ ಕೌಕ್ರಾಡಿ ಮೊದಲಾದ ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು.ಪ್ರಾರ್ಥನೆಯನ್ನು ಮಹಿಳಾ ಮಂಡಲ ಸದಸ್ಯರು ನೆರವೇರಿಸಿದರು, ಗ್ರಾಮ ಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ ಧನ್ಯವಾದವನ್ನು ನೀಡಿದರು,ಕಾರ್ಯಕ್ರಮವನ್ನು ಆಯೋಜಿಸಿ, ಸ್ವಾಗತ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು  ಕಡಬ ತಾಲೂಕು ಯುವಜನ ಒಕ್ಕೂಟದ ಸದಸ್ಯ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಜಯಾನಂದ ಬಂಟ್ರಿಯಾಲ್ ನಡೆಸಿಕೊಟ್ಟರು.

ಜಾಹೀರಾತು

Leave a Reply

error: Content is protected !!