ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಲ್ಲಿ ಬದಲಾವಣೆ- ಇಬ್ಬರು ನಾಯಕರ ಆಯ್ಕೆ-ನಗರ ಬ್ಲಾಕ್ ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣ , ಗ್ರಾಮೀಣ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ

ಶೇರ್ ಮಾಡಿ

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬಣ ರಾಜಕೀಯ, ಕಳೆದ ವಾರ ನಡೆದ ಕಾಂಗ್ರೆಸ್ ಪಕ್ಷದ ಗಲಾಟೆ, ಗದ್ದಲ, ವಿಚಾರ ತಿಳಿದ ಬಳಿಕ ಇದೀಗ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್ ನೀಡಿ ನೂತನ ಇಬ್ಬರು ಅಧ್ಯಕ್ಷರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇಮಕ ಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರನ್ನು ಬದಲಾವಣೆ ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ, ಪೆರಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಕಾಶಿಪಟ್ಣ ಗ್ರಾ.ಪಂ ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸತೀಶ್ ಕೆ ಕಾಶಿಪಟ್ಣ ನೇಮಕವಾಗಿದ್ದಾರೆ. ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ರಂಜನ್ ಜಿ ಗೌಡ ಅವರನ್ನು ಬದಲಾವಣೆ ಮಾಡಿ ಗುತ್ತಿಗೆದಾರ, ಶ್ರೀ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಅವರನ್ನು ಕೆಪಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!