ಅಜ್ಜ- ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಶೇರ್ ಮಾಡಿ

ಕೇರಳದ ತ್ರಿಶೂರ್ ನಲ್ಲಿ ತನ್ನ ಅಜ್ಜ- ಅಜ್ಜಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತ್ರಿಶೂರ್ ಜಿಲ್ಲೆಯ ನಿವಾಸಿ ಅಹ್ಮದ್‌ ಅಕ್ಮಲ್ (27) ಎಂದು ಗುರುತಿಸಲಾಗಿದೆ. ಜುಲೈ 23 ರಂದು ರಾತ್ರಿ ಈತ ತ್ರಿಶೂರ್ ಜಿಲ್ಲೆಯ ವಡೆಕ್ಕೆಕಾಡ್ ಎಂಬಲ್ಲಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಮಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದು, ಈತನ ಬಳಿಯಿಂದ ಚಿನ್ನಾಭರಣ, ಪಾಸ್ ಪೋರ್ಟ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!