ಅರಸಿನಮಕ್ಕಿ ಗ್ರಾಮಪಂಚಾಯತ್ ವ್ಯಾಪ್ತಿಯ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿನ ಶಾಲಿನಿ ಎಂಬ ಮಹಿಳೆಯ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿ (ಶೀಟ್)ಹಾನಿಯಾಗಿದ ಘಟನೆ ಜು.25 ರಂದು ಸಂಭವಿಸಿದೆ.
ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷರ ಮನವಿ ಮೇರೆಗೆ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳಕ್ಕೆ ತೆರಳಿ ಅಪಾಯಕಾರಿಯಾಗಿದ್ದ ಮರದ ಉಳಿದ ಗೆಲ್ಲುಗಳನ್ನು ತೆರವು ಗೊಳಿಸಿ ಛಾವಣಿಗೆ ಹೊಸ ಸಿಮೆಂಟ್ ಶೀಟ್ ಗಳನ್ನು ಅಳವಡಿಸಿಕೊಟ್ಟರು.
ಸುರಿಯುತ್ತಿರುವ ಮಳೆಯಲ್ಲಿಯೇ ನಡೆದ ಈ ಕಾರ್ಯಾಚರಣೆಯಲ್ಲಿ ಘಟಕ ಪ್ರತಿನಿಧಿ ಆನಂದ ನಾಯ್ಕ್ ಅರಸಿನಮಕ್ಕಿ, ಸದಸ್ಯರುಗಳಾದ ಅವಿನಾಶ್ ಭಿಡೆ, ಕೃಷ್ಣಪ್ಪ ಗೌಡ ಮುಚ್ಚರಡ್ಕ, ಕುಶಾಲಪ್ಪ ಗೌಡ ಬದ್ರಿಜಾಲು, ಚೇತನ್ ರೆಖ್ಯ, ಉಜಿರೆ ಘಟಕದ ಸಚಿನ್ ಭಿಡೆ ಹಾಗೂ ರಮೇಶ್ ಬೈರಕಟ್ಟ ಭಾಗವಹಿಸಿದರು.
ಕೊಕ್ಕಡ ಲಕ್ಷ್ಮಿ ಮೆಡಿಕಲ್ ಮಾಲಕ ಸುವಿನ್ ರವರು ಸ್ವಯಂಸೇವಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಊಟ ತಯಾರಿಸಲು ವಿಶ್ವನಾಥ ಗೌಡ ಪರ್ಕಳ ಹಾಗೂ ಮನೆಯವರು ಸಹಕಾರ ನೀಡಿದರು. ಅರಸಿನಮಕ್ಕಿ ಪಂಚಾಯತ್ ಸದಸ್ಯರಾದ ಕಿರಣ್ ಕೆರೆಜಾಲು ತಮ್ಮ ಪಿಕಪ್ ವಾಹನದಲ್ಲಿ ಸಾಮಗ್ರಿಗಳನ್ನು ತಂದು ಕೊನೆಯವರೆಗೂ ಇದ್ದು ಸಹಕರಿಸಿದರು.
ಈ ತುರ್ತು ಸ್ಪಂದನಾ ಕಾರ್ಯದಲ್ಲಿ ಶಿರಾಡಿ ಗ್ರಾಮ ವಿಕಾಸ ಸಮಿತಿಯ ಸದಸ್ಯರು ಮುಂದಾಗಿ ಆಗಮಿಸಿ ಛಾವಣಿಯ ಮೇಲೆ ಬಿದ್ದ ಗೆಲ್ಲು ತೆರವು ಹಾಗೂ ಅಪಾಯಕಾರಿಯಾಗಿದ್ದ ಮರದ ಉಳಿದ ಗೆಲ್ಲುಗಳ ತೆರವು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಶಿರಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ಸುವಿನ್ ಡಿ.ಕುದ್ಕೊಳಿ ಸದಸ್ಯರುಗಳಾದ ಹೊನ್ನಪ್ಪ ಕುದ್ಕೊಳಿ,ಧರ್ಮಪಾಲ ಕುದ್ಕೊಳಿ, ಗಂಗಾಧರ ಕುದ್ಕೊಳಿ, ಧನುಷ್ ಕುದ್ಕೊಳಿ, ಕಿಶನ್ ಕುದ್ಕೊಳಿ ಇವರುಗಳಿಗೆ ಹಾಗೂ ಗೆಲ್ಲು ತೆರವು ಕಾರ್ಯಕ್ಕೆ ಸಹಕಾರ ನೀಡಿದ ಅರಣ್ಯ ಇಲಾಖಾ ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಧನ್ಯವಾದಗಳು…..,🙏🙏🙏