ಜಯರಾಮ ನೆಲ್ಲಿತ್ತಾಯ ರಿಗೆ “ಧಾರ್ಮಿಕ ಸಮಾಜ ಭೂಷಣ” ಪ್ರಶಸ್ತಿ

ಶೇರ್ ಮಾಡಿ

ಶಿಶಿಲ: ಹಲವಾರು ಸಮಾಜಮುಖಿ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬೆಳ್ತಂಗಡಿಯ ಶಿಶಿಲ ಗ್ರಾಮದ ಬಿ.ಜಯರಾಮ ನೆಲ್ಲಿತ್ತಾಯರಿಗೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ (ರಿ)ಚೇರ್ ಮೆನ್ ಹರಿದಾಸ ಅಕಾಡೆಮಿ ಬೆಂಗಳೂರು ಇದರ ಸಂಸ್ಥಾಪಕರಾದ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿರವರು ಮೈಸೂರಿನಲ್ಲಿ “ಧಾರ್ಮಿಕ ಸಮಾಜ ಭೂಷಣ” ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ನಿರಂತರ 40 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಾದ ಗ್ರಾಮೀಣಾಭಿವೃದ್ಧಿ, ಸಮಾಜಸೇವೆ, ಕಳೆದ ಹಲವಾರು ವರ್ಷಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಸೇವೆ, ಭಜನಾ ತಂಡ ರಚನೆ ಮತ್ತು ತರಬೇತಿ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮ,ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ದೇವಾಲಯಗಳ ಜೀರ್ಣೋದ್ಧಾರದ ಕೆಲಸಗಳು, ದೇವಸ್ಥಾನಗಳ ಬ್ರಹ್ಮಕಲಶ ಕಾರ್ಯಕ್ರಮಗಳು, ಶಿಶಿಲದಲ್ಲಿ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಜಯರಾಮ ನೆಲ್ಲಿತ್ತಾಯರವರು ಸಕ್ರೀಯರಾಗಿದ್ದಾರೆ.
ಈ ಸರ್ವಾಂಗೀಣ ಸಮಾಜಮುಖಿ ಕಾರ್ಯಗಳ ಸೇವೆಗಾಗಿ ಈ ಗೌರವ ನೀಡಿ ಸನ್ಮಾನಿಸಲಾಗಿದೆ.

Leave a Reply

error: Content is protected !!