ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಯುವಕನ ಅಸಭ್ಯ ವರ್ತನೆ, ಆರೋಪಿ ವಶಕ್ಕೆ

ಶೇರ್ ಮಾಡಿ

ಬೆಳ್ತಂಗಡಿ:ಸಾರಿಗೆ ಬಸ್ಸಿನಲ್ಲಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ವಿದ್ಯಾರ್ಥಿನಿ ಜತೆ ಮಡಂತ್ಯಾರು ಸಮೀಪ ಯುವಕನೋರ್ವ ಅಸಭ್ಯವಾಗಿ ನಡೆದುಕೊಂಡ ಘಟನೆ ಜು.29 ರಂದು ನಡೆದಿದೆ.
ಇಂದಬೆಟ್ಟು ನಿವಾಸಿ ಕಬೀರ್ ಆರೋಪಿತ.

ಚಿಕ್ಕಮಗಳೂರಿನ ಮೂಡಿಗೆರೆ ಯುವತಿ ತನ್ನೂರಿಗೆ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬರುವ ವೇಳೆ ಜ್ಯೋತಿ ಬಳಿ ಕಬೀರ್ ತನ್ನ ಸೀಟಿನಲ್ಲಿ ಕುಳಿತಿದ್ದು, ಮಡಂತ್ಯಾರಿನಿಂದ ಸ್ವಲ್ಪ ಹಿಂದಕ್ಕೆ ತಲುಪಿದಾಗ ಅಸಭ್ಯವಾಗಿ ವರ್ತಿಸಿದ್ದು, ತಕ್ಷಣ ಪ್ರತೀರೋಧಿಸಿ ಉಜಿರೆಯ ಕಾಲೇಜೊಂದರಲ್ಲಿ ಓದುತ್ತಿದ್ದ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಯುವತಿಯು ಪೋಷಕರಿಗೆ ಮಾಹಿತಿ ನೀಡಿ ಉಜಿರೆಯ ಬಳಿ ಬಸ್ಸು ಬಂದಾಗ ಆರೋಪಿತನನ್ನು ಬಸ್ಸು ಚಾಲಕ ಮತ್ತು ನಿರ್ವಾಹಕರ ಸಹಾಯ ಪಡೆದು ಬಸ್ಸಿನಿಂದ ಕೆಳಗೆ ಇಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Leave a Reply

error: Content is protected !!