ನೇಸರ ಜ.15:ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿ ಉತ್ಸವ,ಭಜನಾ ಮಹೋತ್ಸವ ದಿನಾಂಕ 14 ರ ಶುಕ್ರವಾರ ಪ್ರಾತಃಕಾಲ 6.30 ರಿಂದ ದಿನಾಂಕ 15 ರ ಶನಿವಾರ ಪ್ರಾತಃಕಾಲ 6.30 ರವರೆಗೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯ ಹಾಗೂ ಶ್ರೀಧರ ನೂಜಿನ್ನಾಯರ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ದೇವರಿಗೆ ಉಷಾ ಪೂಜೆ ನಂತರ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬಳಿಕ ಮಹಾಗಣಪತಿ ಹೋಮ,ಸೀಯಾಳಾಭಿಷೇಕ,ಪುಷ್ಪಾಭಿಷೇಕ,ಅಶ್ವಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ ನಡೆಯಿತು.ಮಧ್ಯಾಹ್ನ ಮಹಾರಂಗಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ 12 ಗಂಟೆಯಿಂದ ವಿದುಷಿ ಶ್ರೀಮತಿ ಸುರೇಖಾ ಹರೀಶ್ ಮತ್ತು ಶಿಷ್ಯವೃಂದ ನೆಲ್ಯಾಡಿ -ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ,ಸಂಜೆ ನೀಲಾಂಜನ ದೀಪ ದರ್ಶನ ಮೆರವಣಿಗೆ,ಪುಷ್ಪಾರ್ಚನೆ ನಡೆಯಿತು
ಧಾರ್ಮಿಕ ಸಭಾ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸದಾನಂದ ಕುಂದರ್,ಆಧ್ಯಕ್ಷರು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನೆಲ್ಯಾಡಿ ವಹಿಸಿದರು,ಧಾರ್ಮಿಕ ಉಪನ್ಯಾಸ ನೀಡಿದ ಪುತ್ತೂರು ಅಂಬಿಕಾ ಸಮೂಹ ವಿದ್ಯಾಸಂಸ್ಥೆಯ ಸಂಪನ್ಮೂಲ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯರವರು,ಭಜನೆ,ಪೂಜೆಯಲ್ಲಿ ಏಕಾಗ್ರತೆ ಇರಬೇಕು.ಇದರಿಂದ ಸಿಗುವ ಆನಂದ ಇನ್ನೊಂದರಲ್ಲಿ ಸಿಗಲು ಸಾಧ್ಯವಿಲ್ಲ.ಸ್ವಾರ್ಥವಿಲ್ಲದೆ ಭಕ್ತಿಯಿಂದ ದೇವರ ಆರಾಧನೆ ಆಗಬೇಕು.ಮನೆ ಹಾಗೂ ಮನಸ್ಸು ಸಂಸ್ಕಾರದಿಂದ ಕೂಡಿರಬೇಕೆಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಮಾತನಾಡಿ,ಧಾರ್ಮಿಕ ಚಟುವಟಿಕೆಯ ಜೊತೆಗೆ ಧರ್ಮಜಾಗೃತಿಯ ವಿಚಾರವೂ ಬಹಳ ಮುಖ್ಯವಾಗಿದೆ.ನಮ್ಮ ಮನೆ ಮಂತ್ರಾಲಯ,ವಿದ್ಯಾಲಯ,ಆರಾಧನಾಲಯ ಆಗಬೇಕು.ಪ್ರತಿ ಮನೆಗಳಲ್ಲೂ ಭಜನೆ ನಡೆಯಬೇಕು.ಇದರಿಂದ ಒಗ್ಗಟ್ಟು,ನೆಮ್ಮದಿ ಕಾಣಲು ಸಾಧ್ಯವಿದೆ ಎಂದರು.ಇನ್ನೋರ್ವ ಅತಿಥಿ ಬೆಳ್ತಂಗಡಿಯ ವಕೀಲ ಮನೋಹರ ಇಳಂತಿಲರವರು ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು.ಸಂಸ್ಕಾರವಂತರಾಗಬೇಕೆಂದು ಹೇಳಿದರು. ಭಜನಾ ಸಮಿತಿ ಅಧ್ಯಕ್ಷ ಜನಾರ್ದನ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸುಮಾರು 50 ಸಾವಿರ ರೂ.ವೆಚ್ಚದಲ್ಲಿ ಹುಲಿ ವಿಗ್ರಹ ಕೊಡುಗೆಯಾಗಿ ನೀಡಿದ ಸಾಹಿತಿ ನಾರಾಯಣ ಶೆಟ್ಟಿ ಅಗ್ರಾಳ, ಜಯಾನಂದ ಬಂಟ್ರಿಯಾಲ್, ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟುರವರಿಗೆ ದೇವಸ್ಥಾನದ ವತಿಯಿಂದ ಶಾಲು ಹಾಕಿ ಗೌರವಾರ್ಪಣೆ ಮಾಡಲಾಯಿತು.
ಆಡಳಿತ ಸಮಿತಿ ಕೋಶಾಧಿಕಾರಿ ರವಿಚಂದ್ರ ಹೊಸವೊಕ್ಲು ಸ್ವಾಗತಿಸಿ, ಕಾರ್ಯದರ್ಶಿ ರಾಕೇಶ್.ಯಸ್.ಗೌಡ ವಂದಿಸಿದರು. ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.ರಕ್ಷಾ,ದೀಕ್ಷಾ ಪ್ರಾರ್ಥಿಸಿದರು.
ಕಾರ್ಯಕ್ರಮದ ಬಳಿಕ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ “ಪವಿತ್ರ ಫಲ್ಗುಣಿ” ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು. ಜ.15 ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ದಯಾನಂದ ಕೆ.ಆದರ್ಶ, ಸದಸ್ಯರುಗಳಾದ ಚಂದ್ರಶೇಖರ ಬಾಣಜಾಲು, ಗಣೇಶ್ ಪೂಜಾರಿ ಪೊಸೋಳಿಗೆ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟು, ನಾರಾಯಣ ಶೆಟ್ಟಿ ಪಟ್ಟೆಜಾಲು, ಸಂತೋಷ್ ಕೊಲ್ಯೊಟ್ಟು, ಲೋಕೇಶ್ ಕೊಲ್ಯೊಟ್ಟು, ಕೃಷ್ಣಪ್ಪ ನಿಡ್ಡೋಡಿ, ಪರಮೇಶ್ವರ, ರಮೇಶ್ ಶೆಟ್ಟಿ ಬೀದಿಮನೆ, ಅಣ್ಣಿ ಎಲ್ತಿಮಾರ್, ನಾರಾಯಣ ರೈ ಅಗ್ರಾಳ, ರಘುನಾಥ ಕೆ.,ಜಯರಾಮ ಶೆಟ್ಟಿ ಗೌರಿಜಾಲು, ಗೌರವ ಸಲಹೆಗಾರರಾದ ಟಿ.ಕೆ.ಶಿವದಾಸನ್, ಸುಧೀರ್ ಕುಮಾರ್ ಕೆ.ಎಸ್.,ಬಾಲಕೃಷ್ಣ ಬಾಣಜಾಲು,ಭಜನಾ ಸಮಿತಿಯ, ಕಾರ್ಯದರ್ಶಿ ರಮೇಶ್ ಶೆಟ್ಟಿ ಪರಂತಮೂಲೆ, ಉಪಾಧ್ಯಕ್ಷರಾದ ಪುರುಷೋತ್ತಮ ಆಚಾರ್ಯ, ಶ್ರೀನಿವಾಸ ಆಚಾರ್ಯ, ಜೊತೆ ಕಾರ್ಯದರ್ಶಿ ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು,