ಕಡಬ ತಾಲೂಕಿನ ಇಚ್ಚಿಲಂಪಾಡಿ ಗ್ರಾಮದಲ್ಲಿ ಆನೆ ದಾಳಿ ನಡೆಸಿದ ಪ್ರದೇಶಗಳಿಗೆ ಕೆಪಿಸಿಸಿ ಸದಸ್ಯರಾದ ಜಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಕಾಡಾನೆ ದಾಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಆದಷ್ಟು ಬೇಗ ಇಲಾಖೆ ವತಿಯಿಂದ ಪರಿಹಾರ ದೊರಕಿಸಿ ಕೊಡುವ ಭರವಸೆಯನ್ನು ನೀಡಿದರು .
ಈ ಸಂದರ್ಭದಲ್ಲಿ ಅವರೊಂದಿಗೆ ವಲಯ ಅರಣ್ಯ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಕಡಬ ವಲಯ ಕಾಂಗ್ರೆಸ್ ವೀಕ್ಷಕ ರೋಯ್ ಅಬ್ರಾಹಂ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಶ್, ಕೌಕ್ರಾಡಿ ವಲಯದ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಸದಸ್ಯರಾದ ಕೆ.ಪಿ ತೋಮಸ್, ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಡೈಸಿ ವರ್ಗಿಸ್, ಕಡಬ ವಲಯದ ಹಿಂದುಳಿದ ವಿಭಾಗದ ಮಾಜಿ ಅಧ್ಯಕ್ಷ ಗಿರೀಶ್ ಸಾಲಿಯಾನ್ ಬದನೆ, ಕೌಕ್ರಾಡಿ ಪಂಚಾಯತ್ ನ ಮಾಜಿ ಗ್ರಾಮ ಪಂಚಾಯತ್ ಸದಸ್ಯ ವರ್ಗೀಸ್ ಅಬ್ರಹಾಂ, ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯ ರೋಹಿ.ಟಿ.ಎಂ ಇಚಿಲಂಪಾಡಿ, ಬೂತ್ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಗೌಡ ಅಲೆಕಿ, ಜಾರ್ಜ್ ಕುಟ್ಟಿ ಉಪದೇಶಿ, ಚಾಕೋ ಇಂಜಿನಿಯರ್, ರೇಣು ಮಡಿಪು, ಕಡಬ ಕಾಂಗ್ರೆಸ್ ನ ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರಾ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇಚಿಲಂಪಾಡಿಯ ಕೆಲವು ಬೇಡಿಕೆಗಳ ಬಗ್ಗೆ ಜಿ.ಕೃಷ್ಣಪ್ಪ ಅವರಲ್ಲಿ ಮನವಿ ಮಾಡಲಾಯಿತು.