ನೆಲ್ಯಾಡಿ :ಶಿವಗಿರಿ ಅಯ್ಯಪ್ಪ ಭಜನಾ ಮಂದಿರ ಪಾಂಡಿಬೆಟ್ಟುನಲ್ಲಿ ಮಕರ ಸಂಕ್ರಮಣ ಉತ್ಸವ,ಸಾರ್ವಜನಿಕ ಸತ್ಯನಾರಾಯಣ ಪೂಜೆ

ಶೇರ್ ಮಾಡಿ

ಧ್ವನಿ ಸುರುಳಿ ಬಿಡುಗಡೆ :
ಚಿಗುರು ಕನಸು ತಂಡದ ಪ್ರಕಾಶ್ ಪ್ರಿಯ ನಿರ್ದೇಶನದ “ಶಿವಗಿರಿ ಅಯ್ಯಪ್ಪ – ಶಿವಗಿರಿತ ಬೊಲ್ಪು” ಧ್ವನಿಸುರಳಿ ಬಿಡುಗಡೆ ನಡೆಯಿತು.

ನೇಸರ ಜ.16:ನೆಲ್ಯಾಡಿ ಶಿವಗಿರಿ ಅಯ್ಯಪ್ಪ ಭಜನಾ ಮಂದಿರ ಪಾಂಡಿಬೆಟ್ಟುನಲ್ಲಿ 39ನೇ ವರ್ಷದ ಮಕರ ಸಂಕ್ರಮಣ ಉತ್ಸವ ಮತ್ತು 22ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ದಿನಾಂಕ 14ನೇ ಶುಕ್ರವಾರ ನಡೆಯಿತು.
ಬೆಳಗ್ಗೆ ದೇವತಾ ಪ್ರಾರ್ಥನೆ,ಗಣಹೋಮ,ಶ್ರೀಅಶ್ವತ ಪೂಜೆ ಬಳಿಕ ಶ್ರೀನಿವಾಸ ಬಡೆಕ್ಕಿಲ್ಲಾಯ,ಅರ್ಚಕರು ಶ್ರೀ ಷಣ್ಮುಖ ದೇವಸ್ಥಾನ ಕಾಂಚನ ಪೆರ್ಲ ಆಲಂತಾಯ ಇವರ ನೇತೃತ್ವದಲ್ಲಿ 22ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ :
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಕುಮಾರನ್ ಪಾಂಡಿಬೆಟ್ಟು,ಅಧ್ಯಕ್ಷರು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘ,ಪಾಂಡಿಬೆಟ್ಟು ವಹಿಸಿದರು, ಮುಖ್ಯ ಅತಿಥಿ ಸತೀಶ್ ಭಟ್,ಮುಖ್ಯಗುರುಗಳು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಮಾತನಾಡಿ ಈ ರೀತಿಯ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುವುದರಿಂದ,ನಮ್ಮಲ್ಲಿ ಧಾರ್ಮಿಕ ಭಾವನೆಗಳು ಜಾಗೃತಗೊಳ್ಳುತ್ತದೆ,ಪ್ರತಿಯೊಬ್ಬರು ಮನೆಯಲ್ಲಿ ಶ್ರದ್ಧೆಯಿಂದ ಭಜನಾ ಸಂಕೀರ್ತನೆ ಮಾಡಬೇಕು ಆಗ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಸುಬ್ರಹ್ಮಣ್ಯ ಆಚಾರ್ಯ,ಮಾಲಕರು ಹೋಟೆಲ್ ಸುಬ್ರಹ್ಮಣ್ಯ ವಿಲಾಸ ನೆಲ್ಯಾಡಿ,ಎಂ.ಪಿ ಜತ್ತಪ್ಪ ಗೌಡ ಮಣ್ಣಮಜಲು,ಶ್ರೀಮತಿ ತೇಜಸ್ವಿನಿ ಚಂದ್ರಶೇಖರಗೌಡ ಕಟ್ಟಪುಣಿ,ಕಾರ್ಯದರ್ಶಿ ಕಾರ್ತಿಕ್ ಎಣ್ಣೆತ್ತೋಡಿ,ಸುಂದರ ಗೌಡ, ನೋಣಯ್ಯ ಪೂಜಾರಿ, ಪುರುಷೋತ್ತಮ ಬರಮೇಲು, ಬಾಬು.ಪಿ ಪಾಂಡಿಬೆಟ್ಟು, ವಿನಯ್ ಆರ್ಲ ಉಪಸ್ಥಿತರಿದ್ದರು. ಪ್ರವೀಣ್ ಸ್ವಾಗತಿಸಿ, ಲಿಂಗಪ್ಪ.ಜೆ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ಅನ್ನಸಂತರ್ಪಣೆ,ಸಂಜೆ ಡಾ.ರಾಮಕೃಷ್ಣ ಭಟ್ ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ.ಬಳಿಕ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮುರಾಜೆಕೋಡಿ,ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ- ಕೊಣಾಲು,ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾಸಂಘ ಪಾಂಡಿಬೆಟ್ಟು ಇವರಿಂದ ಕುಣಿತ ಭಜನೆ ನಡೆಯಿತು.

Leave a Reply

error: Content is protected !!