ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

ಶೇರ್ ಮಾಡಿ

ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದಿಗೆ ಚಿಂತನೆ ಮಾಡ್ತಿದ್ದು, ಸ್ವಂತ ಕಾರು ಇರುವವರಿಗೆ ಉಚಿತ ಅಕ್ಕಿ ಬೇಕಾ ಅಂತ ಸಚಿವರು ಪ್ರಶ್ನೆ ಕೇಳಿ ಅನುಮಾನ ಹುಟ್ಟು ಹಾಕಿದ್ದಾರೆ.

ಕಾರು ಇರುವವರಿಗೆ ಬಿಪಿಎಲ್ ಕಾರ್ಡ್‍ನಲ್ಲಿ ಉಚಿತ ಅಕ್ಕಿ ಬೇಕಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಈ ಮೂಲಕ ಸ್ವಂತ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನ ಆಹಾರ ಸಚಿವ ಮುನಿಯಪ್ಪ ಕೊಟ್ಟಿದ್ದಾರೆ.

ಕಾರು ಇರುವವರ ಕಾರ್ಡ್ ರದ್ದು ಮಾಡುವಂತೆ ಹಿಂದಿನ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ವಿವಾದ ಆದ ಬಳಿಕ ಅ ಆದೇಶಕ್ಕೆ ತಡೆ ಕೊಟ್ಟಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯೆಲ್ಲೋ ಬೋರ್ಡ್ ಕಾರು ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಅವರು ಜೀವನಕ್ಕಾಗಿ ಅದನ್ನ ಬಳಕೆ ಮಾಡುತ್ತಾರೆ. ಆದರೆ ಸ್ವಂತ ಕಾರು, ವೈಟ್ ಬೋರ್ಡ್ ಇರೋರಿಗೆ ಉಚಿತ ಅಕ್ಕಿ ಅವಶ್ಯಕತೆ ಇದೆಯಾ ಅಂತ ಚರ್ಚೆ ಮಾಡಬೇಕು ಅಂದರು. ಈ ಮೂಲಕ ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡೋ ಸುಳಿವು ಕೊಟ್ಟರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಕುರಿತು ತನಿಖೆ ಮಾಡೋದಾಗಿ ತಿಳಿಸಿದರು.
ಜಾರಿಗೆ ಮುಂದಾಗಿದ್ದು, ಜನರ ರಿಯಾಕ್ಷನ್ ಏನು ಕಾದು ನೋಡಬೇಕು.

Leave a Reply

error: Content is protected !!