
ಕಡಬ: ಕಳೆದ 10 ತಿಂಗಳಿಂದ ಕಡಬ ತಾಲೂಕಿನಲ್ಲಿ ತಹಸೀಲ್ದಾರ್ ರಾಗಿ ಸೇವೆ ಸಲ್ಲಿಸಿ ಗುಂಡ್ಲುಪೇಟೆಗೆ ವರ್ಗಾವಣೆಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭ ಅ.5ರಂದು ಕಡಬ ಮಿನಿ ವಿಧಾನಸೌಧದಲ್ಲಿ ನಡೆಯಿತು.
ಕಳೆದ 10 ತಿಂಗಳಿಂದ ಕಡಬ ತಾಲ್ಲೂಕಿನ ತಹಸೀಲ್ದಾರ್ ರಾಗಿ ಸಾರ್ವಜನಿಕರ ಜನಸ್ನೇಹಿಯಾಗಿ, ಅಧಿಕಾರಿ ವರ್ಗದವರಿಗೆ ಮಿತ್ರರಾಗಿ ಉತ್ತಮ ಕೆಲಸವನ್ನು ನಿರ್ವಹಿಸಿ, ಜನ ಮೆಚ್ಚಿಗೆ ಪಡೆದ ಅಧಿಕಾರಿಯಾಗಿದ್ದರು.

ಈ ಸಂದರ್ಭದಲ್ಲಿ ಕಡಬ ಪತ್ರಕರ್ತರ ಸಂಘದ ವತಿಯಿಂದ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಡಬ ತಾಲೂಕಿಗೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಪ್ರಭಾರ ತಹಸೀಲ್ದಾರ್ ಮಂಜುನಾಥ, ಕಡಬ ತಾಲೂಕು ಉಪತಹಸೀಲ್ದಾರ್ ಗೋಪಾಲ, ಮನೋಹರ್, ಅಧಿಕಾರಿ ವರ್ಗದವರು, ಪತ್ರಕರ್ತರು ಉಪಸ್ಥಿತರಿದ್ದರು.


