ಸಿದ್ದರಾಮಯ್ಯ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ; ಸಿದ್ದು ಪಾತ್ರದಲ್ಲಿ ಸೇತುಪತಿ

ಶೇರ್ ಮಾಡಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನಾಧಾರಿತ ಚಿತ್ರ ಸೆಟ್ಟೇರಲು ಭರ್ಜರಿ ಸಿದ್ದತೆ ನಡೆದಿದೆ. ಗಂಗಾವತಿ ಮೂಲದ ನಿರ್ಮಾಪಕ ಹಯಾದ್ ಪೀರ್ ಹಾಗೂ ಗೌರಿಬಿದನೂರಿನ ಸತ್ಯರತ್ನಂ ನಿರ್ದೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ ಸಿದ್ಧಪಡಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳು ನಟ ವಿಜಯ ಸೇತುಪತಿ ನಟನೆ ಮಾಡುವುದು ಖಚಿತವಾಗಿದೆ.
ವಿಧಾನಸಭಾ ಚುನಾವಣೆಯ ಮುಂಚಿತವಾಗಿಯೇ ನಿರ್ಮಾಪಕರು ಸಿದ್ದರಾಮಯ್ಯ ಅವರು ಭೇಟಿಯಾಗಿ ಸಿನಿಮಾ ನಿರ್ಮಾಣದ ಕುರಿತು ಮಾಹಿತಿ ನೀಡಲಾಗಿತ್ತು. ಸಿದ್ದರಾಮಯ್ಯ ಅವರ ಬಯೋಪಿಕ್ ನಿರ್ಮಾಣದ ಕೆಲಸ ಮುನ್ನೆಲೆಗೆ ಬಂದಿದೆ. ಚಿತ್ರಕ್ಕೆ ಲೀಡರ್ ರಾಮಯ್ಯ ಎಂದು ಹೆಸರು ಕರೆಯಲಾಗಿದ್ದು, ಮೊದಲ ಹಂತದಲ್ಲಿ ಚಿತ್ರಕ್ಕೆ ಬೇಕಾಗಿರುವ ಹಾಡಿನ ಸಂಯೋಜನೆ ,ಚಿತ್ರೀಕರಣದ ಸ್ಥಳಗಳ ವೀಕ್ಷಣೆಯ ಕೆಲಸಗಳು ಆರಂಭವಾಗಿದ್ದು, ಹಾಡು ಹಾಗೂ ಸಂಗೀತ ಸಂಯೋಜನೆಯ ಹೊಣೆಯನ್ನು ಹಾಡುಗಾರ ಮತ್ತು ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಅವರಿಗೆ ವಹಿಸಲಾಗಿದೆ.

ಸಿದ್ದು ಪಾತ್ರದಲ್ಲಿ ಸೇತುಪತಿ:
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ, ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ವಿಜಯ ಸೇತುಪತಿಯವರು ಸಿದ್ದರಾಮಯ್ಯ ಅವರ ಬಯೋಪಿಕ್‌ನಲ್ಲಿ ನಟನೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ನಿರ್ಮಾಪಕರಾದ ಹಯಾದ್ ಪೀರ್ ಅವರ ತಿಳಿಸಿದ್ದಾರೆ.

ಲೀಡರ್ ರಾಮಯ್ಯ ಚಿತ್ರವು ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರವಾಗಿದ್ದರಿಂದ ವಿಜಯ ಸೇತುಪತಿಯವರು ಲಾಯರ್ ಪಾತ್ರದಲ್ಲಿ ಹಾಗೂ ಮುಖ್ಯಮಂತ್ರಿಯಾಗಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೨೦೧೩ ರಿಂದ ೨೦೧೮ ರಲ್ಲಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯಾಗಿರುವ ವೇಳೆಯಲ್ಲಿನ ಸನ್ನಿವೇಶಗಳನ್ನು ಚಿತ್ರದಲ್ಲಿ ತೊರಿಸಲಾಗುವುದು. ಸಿನಿಮಾದಲ್ಲಿ ೨೦ ರಿಂದ ೩೦ ನಿಮಿಷಗಳ ಕಾಲ ವಿಜಯ ಸೇತುಪತಿಯವರು ನಟನೆ ಮಾಡಲಿದ್ದಾರೆ.

ಹಂತಗಳನ್ನು ಒಳಗೊಂಡ ಚಿತ್ರ :
ಬಯೋಪಿಕ್ ನಿರ್ಮಾಣಕ್ಕೆ ಮುಂದಾಗಿರುವ ಚಿತ್ರ ತಂಡವು ಮೂರು ಹಂತಗಳಲ್ಲಿ ಸಿದ್ದರಾಮಯ್ಯ ಅವರು ಜೀವನಾಧರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಬಾಲ್ಯದ ಜೀವನ, ಎರಡನೇ ಹಂತದಲ್ಲಿ ಸಿದ್ದರಾಮಯ್ಯ ಅವರ ಹೋರಾಟ ಹಾದಿ, ಮೂರನೇ ಹಂತದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಯಶೋಗಾಥೆಯನ್ನು ಚಿತ್ರವು ಒಳಗೊಂಡಿದೆ. ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಚಿತ್ರತಂಡವು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಬಾಲ್ಯದ ಜೀವನ ಚಿತ್ರೀಕರಣ ಸ್ಥಳ ಗುರುತಿಸಿದ್ದು, ಆದಷ್ಟು ಬೇಗನೆ ಚಿತ್ರೀಕರಣ ಆರಂಭ ಮಾಡಲಾಗುವುದು ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜೀವನ ಆಧಾರಿತ ಬಯೋಪಿಕ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆಯನ್ನು ನೀಡಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಅವರ ಪಾತ್ರದಲ್ಲಿ ತಮಿಳು ನಟ ವಿಜಯ ಸೇತುಪತಿಯವರು ನಟನೆ ಮಾಡಲು ಒಪ್ಪಿಗೆಯನ್ನು ನೀಡಿದ್ದಾರೆ. ಹಾಡು, ಮ್ಯೂಸಿಕ್ ಕೆಲಸ ಈಗಾಗಲೇ ಮುಗಿದಿದೆ. ಆದಷ್ಟು ಬೇಗ ಚಿತ್ರೀಕರಣ ಆರಂಭ ಮಾಡಲಾಗುವುದು.
ಹಯಾದ್ ಫೀರ್, ಚಿತ್ರ ನಿರ್ಮಾಕರು.

Leave a Reply

error: Content is protected !!