ಶ್ರೀ ಧ.ಮಂ.ಪ.ಪೂ ಕಾಲೇಜು: ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಶೇರ್ ಮಾಡಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಭಾರತದ ಸ್ವಾತಂತ್ಯ ಅಮೃತ ಮಹೋತ್ಸವ ವರ್ಷದ ಸಲುವಾಗಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಒಂದಾದ ಪಂಚಪ್ರಾಣ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಪಂಚಪ್ರಾಣ ಪ್ರತಿಜ್ಞೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬೋಧಿಸಿದರು.
ಅಭಿವೃದ್ದಿ ಭಾರತದ ನಿರ್ಮಾಣದಲ್ಲಿ ಪಾಲ್ಗೊಳ್ಳುವಿಕೆ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು, ದೇಶದ ಏಕತೆ ಮತ್ತು ಒಗ್ಗಟ್ಟಿಗೆ ಶ್ರಮಿಸುವುದು, ದೇಶಕ್ಕಾಗಿ ನನ್ನ ಕರ್ತವ್ಯ, ತ್ಯಾಗ ಬಲಿದಾನ ಮಾಡಿದ ವೀರರಿಗೆ ಗೌರವ ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆ ಮೂಡಿಸುವ ಪ್ರತಿಜ್ಞೆಯನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಕೈಗೊಂಡರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಹಾಗೂ ಎಲ್ಲಾ ಸ್ವಯಂಸೇವಕರು ಉಪಸ್ಥಿತರಿದ್ದು ಪ್ರತಿಜ್ಞೆ ಸ್ವೀಕರಿಸಿದರು.

Leave a Reply

error: Content is protected !!