ಕಡಬ:ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜ್ ನಲ್ಲಿ ಆ.14 ರಂದು ನಡೆದ ತುಳುನಾಡ ಆಟಿಡ್ ಒಂಜಿ ದಿನ ವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಪ್ರದಾಯಿಕ ವಸ್ತ್ರ ತೊಟ್ಟಿದ್ದರು. ವೇದಿಕೆಯಲ್ಲಿ ತುಳು ಸಂಸ್ಕೃತಿಯ ವೈಶಿಷ್ಟ್ಯತೆಯ ಕುರಿತು ಭಾಷಣ , ಆಟಿಕಲೆಂಜ ನೃತ್ಯ, ಹಾಡು, ನೃತ್ಯ ವೈಭವವನ್ನು ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಭೆಯಲ್ಲಿ ಶಾಲಾ ಸ್ಥಳೀಯ ಸಂಚಾಲಕರಾದ ಫಾದರ್ ವಿಜೋಯ್ ವರ್ಗೀಸ್, ಫಾದರ್ ಪ್ರೇಮನಂದ್, ಫಾದರ್ ಶೈಜು ಉಪಸ್ಥಿತರಿದ್ದರು. ಸಭೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ಶ್ರೀಧರ ಗೌಡ ಗೋಲ್ತಿಮಾರು ಹಾಜರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಸಂಸ್ಥೆಯಲ್ಲಿ ನಡೆಯುವ ವಿನೂತನ ಕಾರ್ಯಕ್ರಮ ಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಜರಾಗಿದ್ದರು. ಕಾಲೇಜ್ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಆಟಿಡೊಂಜಿ ದಿನದ ಬಗ್ಗೆ ಹಿತ ನುಡಿಗಳನ್ನಾಡಿದರು. ಕುಮಾರಿ ಅಂಕಿತ ಸ್ವಾಗತಿಸಿ, ಕುಮಾರಿ ವಂಶಿತ ವಂದಿಸಿದರು. ಕುಮಾರಿ ಸೌಪರ್ಣಿಕಾ ನಿರೂಪಣೆ ಮಾಡಿದರು. ಅಧ್ಯಾಪಕರಾದ ಬಿಜು ಮತ್ತು ಶಿಲ್ಪ ನೇತೃತ್ವದಲ್ಲಿ ಮತ್ತು ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಮನೆಯಿಂದ ತಂದ ಬಗೆ- ಬಗೆಯ ಆಟಿಯಲ್ಲಿ ಮಾಡುವ ವಿಶೇಷ ತಿನಿಸುಗಳನ್ನು ಎಲ್ಲರೂ ಸವಿದರು