ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ ಎಸ್ ಇವರು ಧ್ವಜಾರೋಹಣಗೈದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿದ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಎಚ್ ಮಾಧವ್ ಭಟ್ ಇವರು ‘ಸ್ವತಂತ್ರ ಭಾರತ-ಭವಿಷ್ಯ ಮತ್ತು ಸವಾಲುಗಳು’ ಎಂಬ ವಿಷಯವಾಗಿ ಮಾತನಾಡುತ್ತಾ “ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಜನರು ತಮ್ಮನ್ನು ತಾವು ಸಮರ್ಪಣೆ ಮಾಡಿದ್ದಾರೆ. ಇಂದಿನ ದಿವಸ ಇದು ಏಕೆ ಪ್ರಸ್ತುತ ಅಂತ ಕೇಳಿದರೆ, ಇಂಥವರ ಸಮರ್ಪಣೆಯನ್ನು ನೆನೆಯುವುದಕ್ಕಾಗಿ. ನಮ್ಮ ರಾಷ್ಟ್ರ ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಾಧನೆಗೈಯ್ಯುವ ತಾಕತ್ತು ಇರುವಂತಹ ರಾಷ್ಟ್ರ. ನಮ್ಮ ರಾಷ್ಟ್ರದ ಜನರ ಕೊಡುಗೆ ವಿಶ್ವಮಟ್ಟದಲ್ಲಿ ಖಂಡಿತವಾಗಿಯೂ ಇದೆ. ಬಹಳಷ್ಟು ಸಾಮರ್ಥ್ಯವನ್ನು ಹುದುಗಿಸಿ ಇಟ್ಟುಕೊಂಡಿರುವಂತಹ ಭಾರತ, ವಾಸ್ತವದಲ್ಲಿ ಅದನ್ನ ಪ್ರಕಟಗೊಳಿಸುವಲ್ಲಿ ವಿಫಲವಾಗುತ್ತಾ ಇದೆ. ಇದು ನಮಗೆ ಸವಾಲೇ ಸರಿ. ನಾವು ಮೀರಿ ನಿಲ್ಲಬೇಕಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ನಮ್ಮ ಯುವಕರಲ್ಲಿ ರಾಷ್ಟ್ರಕ್ಕಾಗಿ ಪುಟಿದೇಳುವ ಮನಸ್ಥಿತಿ ಜಾಗೃತವಾಗಬೇಕಾಗಿದೆ. ಯಾವಾಗ ರಾಷ್ಟ್ರದ ಯುವ ಜನತೆ ಸ್ವಯಂ ಜಾಗೃತಿಯಿಂದ ಕಾರ್ಯ ತತ್ಪರರಾಗುತ್ತಾರೋ ಆಗ ಆ ರಾಷ್ಟ್ರದ ಭವಿಷ್ಯ ಉಜ್ವಲವಾಗಿ ಬೆಳಗುತ್ತದೆ. ಒಂದು ಹೂದೋಟದಲ್ಲಿ ಅನೇಕ ಹೂವುಗಳಿದ್ದಾಗ ಎಷ್ಟು ಚೆನ್ನಾಗಿ ಕಾಣಿಸುತ್ತದೆಯೋ ಈ ರಾಷ್ಟ್ರದಲ್ಲಿ ವೈವಿಧ್ಯತೆ ಇರುವಂತಹ ಸತ್ಪ್ರಜೆಗಳು, ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಂಡು ಕಾರ್ಯಯೋನ್ಮುಖರಾದಾಗ ಸುಂದರವಾದ ರಾಷ್ಟ್ರದ ನಿರ್ಮಾಣ ಖಂಡಿತವಾಗಿಯೂ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಯುವಕರು ಕೆಲಸ ಮಾಡಬೇಕಾಗಿದೆ” ಎಂದು ಕರೆಯನ್ನು ಕೊಟ್ಟರು.
ಸಮಾರಂಭದ ವಿಶೇಷ ಅತಿಥಿಯಾದ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್ ಬೀರಂತಡ್ಕ ಇವರು ಮಾತನಾಡುತ್ತಾ” ಯುವ ಜನತೆ ರಾಷ್ಟ್ರಭಕ್ತಿಯನ್ನು, ಹಿರಿಯರಿಗೆ ಗೌರವವನ್ನು ಕೊಡುವ ಮೌಲ್ಯಗಳನ್ನು ಅನುಸರಿಸಬೇಕು. ಗುರುಗಳಿಗೆ ಗೌರವವನ್ನು ಕೊಡುತ್ತಾ ಅವರು ಹೇಳಿಕೊಟ್ಟ ಪಾಠವನ್ನು, ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದಾಗ ನಾವು ಈ ರಾಷ್ಟ್ರದ ಆಸ್ತಿಯಾಗುತ್ತೇವೆ. ಇದು ರಾಷ್ಟ್ರದ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ” ಎಂದು ಸಂದೇಶವನ್ನು ನೀಡಿದರು. ನಂತರ ಅವರು ತಮ್ಮ ಕಲೆಯ ಪ್ರದರ್ಶನವನ್ನು ಮಾಡಿ ವಿದ್ಯಾರ್ಥಿಗಳನ್ನು ಮನೋರಂಜಿಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದಿದ್ದ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ರಾಧಾಕೃಷ್ಣ ಕೆ ಎಸ್ ಇವರು ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಾಧವ್ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಯ್ಲ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ, ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಅತಿಥಿಗಳನ್ನುಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದಚಂದ್ರಶೇಖರ್ ಕೆ ಇವರು ಸ್ವಾಗತಿಸಿದರು. ಮುಖ್ಯ ಗುರುಗಳಾದ ಸತೀಶ್ ಭಟ್ ವಂದನಾರ್ಪಣೆಗೈದರು. ಉಪನ್ಯಾಸಕರಾದ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿಯರಾದ ಹರ್ಷ ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಗಣೇಶ್ ಸಹಕರಿಸಿದರು. ಸಭಾ ಕಾರ್ಯ್ರಮದ ಬಳಿಕ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Follow us ON:

ಗೂಗಲ್ ನ್ಯೂಸ್ 

ಫೇಸ್ಬುಕ್ ಪೇಜ್

🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!