ನೇಸರ ಜ.20: ಕಡಬ ಕದಂಬ ಜೇಸಿಐ ಹಾಗೂ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ “ಯುವಜನ ಸಬಲೀಕರಣ”(ಯೂತ್ ಎಂಪವರ್ ವೆಂಟ್)ಎಂಬ ವಿಷಯದ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಮಕ್ಕಳ ಪಾಲಕರಿಗಾಗಿ “ಜವಾಬ್ದಾರಿಯುತ ಪಾಲಕತ್ವ” ಎಂಬ ವಿಷಯದ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಚೇತನ್ ಮೊಗ್ರಾಲ್ ಆಗಮಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕಡಬ ಕದಂಬ ಇದರ ಅಧ್ಯಕ್ಷರಾದ ಕಾಶಿನಾಥ್ ಗೋಗಟೆ ವಹಿಸಿ ಮಾತನಾಡಿದ ಅವರು ಜೇಸಿಐ ಕಡಬ ಕದಂಬದ ವತಿಯಿಂದ ನಡೆಸಲ್ಪಡುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಬೆಥನಿ ವಿದ್ಯಾಸಂಸ್ಥೆಯಲ್ಲಿ ಪ್ರತೀ ವರುಷ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು.ಜೇಸಿಐ ವತಿಯಿಂದ ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ಸಂಸ್ಥೆಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಾಕ್ರವನ್ನು ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು.ಪ್ರಾಂಶುಪಾಲರಾದ ಜಾರ್ಜ್.ಟಿ.ಎಸ್ ಮಾತನಾಡಿ,ಪಾಲಕರು ಹಾಗೂ ವಿದ್ಯಾರ್ಥಿಗಳು ಕೊರೋನಾ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಇಲಾಖೆಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿಗಳ ಬಗ್ಗೆ ವಿವರವಾದ ಮಾರ್ಗದರ್ಶನವನ್ನು ನೀಡಿದರು.ವಿದ್ಯಾರ್ಥಿಗಳಲ್ಲಿ ಇರುವ ಆತಂಕ,ಖಿನ್ನತೆ ಹಾಗೂ ಪರೀಕ್ಷಾ ಭಯ ನಿವಾರಿಸುವಲ್ಲಿ ಪಾಲಕರ ಜವಬ್ದಾರಿಗಳ ಬಗ್ಗೆ ಈ ಕಾರ್ಯಾಗಾರ ಪ್ರಯೋಜನವಾಗಲಿದೆ ಎಂದು ತಿಳಿಸಿ,ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿದರು.ಜೇಸಿಐ ಕಡಬ ಕದಂಬ ಇದರ ಕಾರ್ಯದರ್ಶಿ ಸ್ವಾಗತಿಸಿದರು.ವೇದಿಕೆಯಲ್ಲಿ ಜೇಸಿಐ ನಿಕಟಪೂರ್ವ ಅಧ್ಯಕ್ಷರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗಾಗಿ ಖಿನ್ನತೆ ಹಾಗು ಒತ್ತಡ ನಿವಾರಣೆ,ಪರೀಕ್ಷಾ ಭಯ ನಿವಾರಣೆ ಹಾಗೂ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು. ಪ್ರಾರ್ಥನೆ ಹಾಗೂ ಜೇಸಿ ವಾಣಿಯೊಂದಿಗೆ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳು ನೆರವೇರಿಸಿದರು.