ನೆಲ್ಯಾಡಿ ಗ್ರಾಮದ ಕುಡ್ತಾಜೆ, ಪಿಲವೂರಬೈಲ್, ಬರಮೇಲು ಬೈಲುಗಳಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಬಾಳೆಗಿಡ, ತೆಂಗು, ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಅಪಾರ ನಷ್ಟ ಉಂಟುಮಾಡಿವೆ.
ಆ.16ರ ರಾತ್ರಿಯ ಸಮಯದಲ್ಲಿ ಆನೆಯ ದಾಳಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ಮೊದಲ ಬಾರಿಗೆ ಕುಡ್ತಾಜೆಯ(ಮಾದೇರಿಗೆ) ಊರಿಗೆ ಕಾಡಾನೆಗಳ ದಾಳಿಯಾಗಿದ್ದು, ಊರಿನ ಜನರಲ್ಲಿ ಹಾಗು ಕೃಷಿಕರಲ್ಲಿ ಆತಂಕವನ್ನುಂಟು ಮಾಡಿದೆ.



