ಕುಂತೂರು ಕೇವಳದಲ್ಲಿ ಕಾಡಾನೆ ದಾಳಿ- ಬಾಳೆ ಕೃಷಿಗೆ ಹಾನಿ

ಶೇರ್ ಮಾಡಿ

ನೆಲ್ಯಾಡಿ: ಕಳೆದ ಕೆಲ ದಿನಗಳಿಂದ ಶಿವಾರುಮಲೆ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆ ದಾಂಧಲೇ ಮುಂದುವರಿದಿದ್ದು ಕಳೆದ ರಾತ್ರಿ ಕುಂತೂರು ಗ್ರಾಮದ ಕೇವಳ ಎಂಬಲ್ಲಿ ತೋಟಕ್ಕೆ ನುಗ್ಗಿ ಬಾಳೆಕೃಷಿ ಹಾನಿಗೊಳಿಸಿವೆ.
ಕೇವಳ ನಿವಾಸಿ ಗುರುರಾಜ್ ರೈ ಹಾಗೂ ರಾಜೇಶ್ ಶೆಟ್ಟಿ ಎಂಬವರ ತೋಟಕ್ಕೆ ನುಗ್ಗಿರುವ ಕಾಡಾನೆ ಬಾಳೆಕೃಷಿ ಹಾನಿಗೊಳಿಸಿದೆ.
ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಕಾಡಾನೆ ತೋಟಕ್ಕೆ ಬಂದಿರುವುದು ಮನೆಯವರಿಗೆ ಅರಿವಾಗಿದೆ. ತೋಟದಲ್ಲಿನ ಬಾಳೆಕೃಷಿ ಹಾನಿಗೊಳಿಸಿರುವ ಆನೆ ಮತ್ತೆ ಕಾಡಿಗೆ ತೆರಳಿದೆ. 1 ದಿನದ ಮೊದಲು ನೆಲ್ಯಾಡಿ ಗ್ರಾಮದ ಕುಡ್ತಾಜೆ, ಪಿಲವೂರುಬೈಲ್ ವ್ಯಾಪ್ತಿಯಲ್ಲಿ ತೋಟಗಳಿಗೆ ನುಗ್ಗಿ ಬಾಳೆ,ತೆಂಗು,ಅಡಿಕೆ ಕೃಷಿಗೆ ಹಾನಿಗೊಳಿಸಿದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಕಾಡಾನೆ ಕೃಷಿ ತೋಟಗಳಿಗೆ ನುಗ್ಗಿ ಹಾನಿಗೊಳಿಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Leave a Reply

error: Content is protected !!