ನಡು ರಸ್ತೆಯಲ್ಲೇ ಪಾನಮತ್ತ ಯುವತಿಯ ರಂಪಾಟ; ವಿಡಿಯೋ ವೈರಲ್

ಶೇರ್ ಮಾಡಿ

ಗೋವಾದಲ್ಲಿ ಕಂಠಪೂರ್ತಿ ಕುಡಿದ ಯುವತಿಯೊಬ್ಬಳು ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಣಜಿಯ ಮುಖ್ಯ ರಸ್ತೆಯಲ್ಲಿರುವ ಕ್ಯಾಸಿನೊ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಯುವತಿ ಮದ್ಯದ ಅಮಲಿನಲ್ಲಿ, ಅರಿವೇ ಇಲ್ಲದೆ ಬೀದಿಯಲ್ಲಿ ಅಲೆದಾಡಿದ್ದಾಳೆ. ರಸ್ತೆಯಲ್ಲಿ ಹೋಗುತ್ತಿದ್ದ ಕಾರುಗಳನ್ನು ನಿಲ್ಲಿಸುವುದು ಮತ್ತು ಚಾಲಕರೊಂದಿಗೆ ಜಗಳವಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆಕೆಯ ಸ್ನೇಹಿತ ರೆಂಟ್ ಎ ಕ್ಯಾಬ್‍ನಲ್ಲಿ ಕಾರು ಪಡೆದುಕೊಂಡಿದ್ದ. ಆದರೆ, ಆಕೆ ರಸ್ತೆಯಲ್ಲಿ ಮಾಡಿದ ಗಲಾಟೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹೀಗಾಗಿ ವಾಹನಗಳ ಸಾಲು ನಿಂತಿತ್ತು.

ಈ ಯುವತಿ ಮದ್ಯದ ಅಮಲಿನಲ್ಲಿರುವ ಕಾರಣ ಯಾರೂ ಅವಳ ಹತ್ತಿರ ಹೋಗಲು ಧೈರ್ಯ ಮಾಡಲಿಲ್ಲ. ಅದಲ್ಲದೆ ನಡುರಸ್ತೆಯಲ್ಲಿ ಐಸ್ ಕ್ರೀಂ ತಿನ್ನುತ್ತಾ ನಡೆಯುತ್ತಿದ್ದಳು. ಪ್ರತ್ಯಕ್ಷದರ್ಶಿಗಳ ಪ್ರಕಾರ ಯುವತಿ ಮತ್ತು ಯುವಕ ಇಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದರು.

ಗೋವಾದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಿಂದ ಆಗ್ರಹ ವ್ಯಕ್ತವಾಗುತ್ತಿದೆ. ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಇದೀಗ ಗೋವಾದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Leave a Reply

error: Content is protected !!