ಉಪ್ಪಿನಂಗಡಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 15ರ ಬಾಲಕ ಮೃತ್ಯು

ಶೇರ್ ಮಾಡಿ

ಉಪ್ಪಿನಂಗಡಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉಪ್ಪಿನಂಗಡಿಯ 15 ವರ್ಷದ ಬಾಲಕನೋರ್ವ ಬೆಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.

ಪೆದಮಲೆಯ ಸಮದ್ ಹಾಜಿ ಹಾಗೂ ರೇಷ್ಮಾ ದಂಪತಿಯ ಪುತ್ರ ಅಹ್ಮದ್ ಸಹದ್(15) ಮೃತಪಟ್ಟ ಬಾಲಕ.

ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಹ್ಮದ್ ಸಹದ್, ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಅನಾರೋಗ್ಯ ಕಾರಣ ಈತನನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಮೃತನ ಸ್ಮರಣಾರ್ಥ ಆ.22ರಂದು ಇಂಡಿಯನ್ ಸ್ಕೂಲ್ ಗೆ ರಜೆ ಸಾರಲಾಗಿದೆ.

Leave a Reply

error: Content is protected !!