ಕಡಬ: ಕಾಡು ಪ್ರಾಣಿಗಳ ಬೇಟೆಯಾಡಿ ಕಡಬ ಪೋಲಿಸರ ಬಲೆಗೆ ಬಿದ್ದ ಮೂರು ಆರೋಪಿಗಳ ಬಂಧನವಾದ ಘಟನೆ ಠಾಣಾ ವ್ಯಾಪ್ತಿಯ ಕುಂತೂರು ಬಳಿ ಮಂಗಳವಾರ ನಡೆದಿದೆ.
ಬಲ್ಯ ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಮುಂಜಾವಿನ ವೇಳೆ ಮನೆಯ ಕಡೆ ತೆರಳುತ್ತಿದ್ದಾಗ ಗುಸ್ತು ತಿರುಗುತ್ತಿದ್ದ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರನ್ನು ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ.
ಕಡಬ ಎಸ್ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಕುಂತೂರು ಬಳಿ ಬಂದಾಗ ಇನ್ನೋವ ಕಾರು ಅನುಮಾನಾಸ್ಪದವಾಗಿ ಚಲಾಯಿಸುತ್ತಿರುವುದು ಕಂಡು ಬಂತು, ವಾಹನ ನಿಲ್ಲಿಸಿ ತಪಾಸನೆ ಮಾಡಿದಾಗ ಕಾರಿನಲ್ಲಿ ಬೇಟೆಯಾಡಿದ ಪ್ರಾಣಿಗಳು ಕಂಡು ಬಂದಿದೆ ಮೂವರು ಬೇಟೆಗಾರರು, ಬೇಟೆಯಾಡಿಡ ಒಂದು ಮುಳ್ಳು ಹಂದಿ, ಎರಡು ಬರಿಂಕ, ಒಂದು ಬೆರು ಎನ್ನುವ ಪ್ರಾಣಿಗಳು ಪತ್ತೆಯಾಗಿದೆ. ಜೊತೆಗೆ ಒಂದು ಕೋವಿ ಸಿಕ್ಕಿದೆ. ಮೂವರನ್ನು ಬಂದಿಸಿರುವ ಪೋಲೀಸರು, ಬೇಟೆಯಾಡಿದ ಪ್ರಾಣಿ, ಕೋವಿ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಕರಣ ದಾಖಲಿಸಲು ಆದೇಶಿಸಿದೆ ಎಂದು ತಿಳಿದು ಬಂದಿದೆ.