ಕೊಯಿಲ: ಆತೂರು ಶ್ರೀ ಸದಾಶಿವ ದೇವಸ್ಥಾನ ಕಾರ್ಯಕ್ರಮಗಳ ಶುಭಾರಂಭ, ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ, ಧಾರ್ಮಿಕ ಸಭೆ

ಶೇರ್ ಮಾಡಿ

ಕಡಬ: ಶ್ರದ್ಧಾಕೇಂದ್ರಗಳ ಧಾರ್ಮಿಕ ಚಟುವಟಿಕೆಯಲ್ಲಿ ನಮ್ಮ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡುವುದು ಹಿರಿಯ ಜವಬ್ದಾರಿಯಾಗಿದೆ. ಶ್ರದ್ದಾ ಕೇಂದ್ರಗಳ ಅಭಿವೃದ್ದಯಿಂದ ಧರ್ಮ ಜಾಗೃತಿ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.
ಅವರು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ನಿರ್ಮಾಣ ಹಂತದ ಸಭಾಭವನದಲ್ಲಿ ಕಾರ್ಯಕ್ರಮಗಳ ಶುಭಾರಂಭ ಹಾಗು ಸಾಮೂಹಿಕ ಶ್ರೀ ವರಮಹಾಲಕ್ಮೀ ಪೂಜೆ ಯ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದರು.

ಮಾಲತಿ ಅಮೈ ಕಲಾಯಿಗುತ್ತು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವಅಧ್ಯಕ್ಷ ಸುನಿತ್ ರಾಜ್ ಶೆಟ್ಟಿ ಬಂತೆಜಾಲು, ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ, ಉದ್ಯಮಿ ಕೇಶವ ಅಮೈ ಕಲಾಯಿಗುತ್ತು ಶುಭಹಾರೈಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಪ್ರಸ್ತಾವಿಸಿದರು. ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಭವಾನಿಶಂಕರ ಪರಂಗಾಜೆ ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಮುರಳಿಕೃಷ್ಣ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ನಡೆಯಿತು. ದೇವಸ್ಥಾನ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ ವೈದಿಕ ಕಾರ್ಯ ನಡೆಸಿದರು.

Leave a Reply

error: Content is protected !!