ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಂದ್ರಯಾನ 3 ಯಶಸ್ಸಿನ ಸಂಭ್ರಮಾಚರಣೆ

ಶೇರ್ ಮಾಡಿ

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಂದ್ರಯಾನ 3 ಯಶಸ್ಸಿನ ಸಂಭ್ರಮಾಚರಣೆಯನ್ನು ಪ್ರಾರ್ಥನಾ ಅವಧಿಯಲ್ಲಿ ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಚಂದ್ರಯಾನ 3 ರ ಯಶಸ್ಸಿಗೆ ಶುಭಾಶಯವನ್ನು ಕೋರಿ ಇದೊಂದು ಯಶಸ್ಸಿನ ಉತ್ತುಂಗಕ್ಕೆ ಇಂದು ಭಾರತವನ್ನು ತಂದಿದೆ. ಇದು ನಮ್ಮ ದೇಶದ ಯಶಸ್ಸು ಮಾತ್ರವಲ್ಲದೆ ಇಡೀ ಪ್ರಪಂಚದ ಯಶಸ್ಸು. ಭಾರತ ನವ ಮನ್ವಂತರವನ್ನು ಸೃಷ್ಟಿಸಿದೆ. ಇಸ್ರೋದ ಈ ಸಾಧನೆ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೇಟ್ ಚಂದ್ರಯಾನ 3ರ ಯಶಸ್ವಿಗೆ ಶುಭಾಶಯವನ್ನು ಕೋರುತ್ತಾ ಜೀವನದಲ್ಲಿ ದಾಖಲೆ ಎಂದರೆ ಯಾರು ಮುರಿಯದಂತಹ ದಾಖಲೆ ಮಾಡಬೇಕು. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್ ಇಳಿಸುವ ಮೂಲಕ ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ದಾಖಲೆಯನ್ನು ಸೃಷ್ಟಿಸಿದೆ. ಈ ಸಾಧನೆಯನ್ನು ಇನ್ಯಾರು ಮುರಿಯಲು ಸಾಧ್ಯವಿಲ್ಲ. ಈ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿನ ಎದುರು ಅನಾವರಣಗೊಳಿಸಿದೆ ಎಂದರು.
ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!