ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ಮಹಿಳೆ ನಾಪತ್ತೆ ;ಠಾಣೆಯಲ್ಲಿ ಪ್ರಕರಣ ದಾಖಲು

ಶೇರ್ ಮಾಡಿ

ಕಡಬ: ಕೆಲಸಕ್ಕೆಂದು ಮನೆಯಿಂದ ಹೋದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಶನಿವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐತ್ತೂರು ಗ್ರಾಮದ ಓಟೆಕಜೆ ಸಿಆರ್‌ಸಿ (ತಮಿಳು ಕಾಲನಿ) ನಿವಾಸಿ, ಬಿಳಿನೆಲೆಯ ರಬ್ಬರ್‌ ಸಂಸ್ಕರಣ ಕಾರ್ಖಾನೆಯಲ್ಲಿ ಚಾಲಕನಾಗಿರುವ ಶಿವಕುಮಾರ್‌ ಅವರ ಪತ್ನಿ ಮಂಜುಳಾ (35) ಕಾಣೆಯಾದವರು. ಈ ಬಗ್ಗೆ ಮಹಿಳೆಯ ಪತಿ ಶಿವಕುಮಾರ್‌ ಅವರು ಠಾಣೆಗೆ ದೂರು ನೀಡಿದ್ದಾರೆ.
ಬಿಳಿನೆಲೆಯ ನೆಟ್ಟಣದಲ್ಲಿರುವ ವಾಹನ ಇನ್ಶೂರೆನ್ಸ್‌ ಏಜೆನ್ಸಿ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ಮಂಜುಳಾ ಆ. 25 ರಂದು ಮುಂಜಾನೆ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಬಳಿಕ ಆಕೆಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಎಲ್ಲೆಡೆ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
%d bloggers like this: