ನೂಜಿಬಾಳ್ತಿಲ: ಬೆಥನಿ ಪದವಿ ಪೂರ್ವ ಕಾಲೇಜು ಇಲ್ಲಿ ಆಗಸ್ಟ್ 26 ರಂದು ಓಣಂ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಚಾಲಕರಾದ ಫಾದರ್ ವಿಜೋಯ್ ವರ್ಗೀಸ್ ಮತ್ತು ಫಾದರ್ ಮಾರ್ಟಿನ್ ಪ್ರೇಮಾನಂದ, ಫಾದರ್ ಜೋಸೆಫ್ ಶೈಜು, ಫಾದರ್ ಜೋಬಿ ಹಾಗೂ ಕಾಲೇಜು ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ಮುಖ್ಯ ಗುರುಗಳಾದ ತೋಮಸ್ ಏ.ಕೆ ಉಪಸ್ಥಿತರಿದ್ದರು.
ಫಾದರ್ ವಿಜೋಯ್ ವರ್ಗೀಸ್ ಮಾತನಾಡಿ ಓಣಂ ಹಬ್ಬದ ಮಹತ್ವವನ್ನು ವಿವರಿಸಿದರು. ಪ್ರಾಂಶುಪಾಲರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ನಿರೂಪಣೆ ಕುಮಾರಿ ಸುಷ್ಮಾ ಮತ್ತು ಕುಮಾರಿ ಅಂಕಿತ. ಕುಮಾರಿ ಅಶ್ವಿತ ವಂದಿಸಿದರು. ಸಂತೋಷನ ನೇತೃತ್ವದಲ್ಲಿ ಪೂಕ್ಕಳ0 ಹಾಕಿದರು. ಕಾರ್ಯಕ್ರಮದಲ್ಲಿ ತಿರುವಾದಿರ ನೃತ್ಯ, ಹಾಡು, ಭಾಷಣ ಹಾಗೂ ಮನರಂಜನಾ ಆಟಗಳನ್ನು
ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮಡಿಕೆ ಹೊಡೆಯುವುದು, ಗೋಣಿಚೀಲ ಓಟ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಎಲ್ಲಾ ಉಪನ್ಯಾಸಕರ, ಅಧ್ಯಾಪಕರ ಹಾಗೂ ಅಧ್ಯಾಪಕಕೇತರ ವೃಂದದ ಸಹಕಾರದೊಂದಿಗೆ ಆಚರಿಸಲಾಯಿತು.