ಜಗತ್ತಿನ ಹುಬ್ಬೇರಿಸಿದ ಯಶಸ್ವಿ ಚಂದ್ರಯಾನ 3 ಬೆನ್ನಲ್ಲೇ ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಉಡಾವಣೆಗೆ ಸಜ್ಜಾಗಿದೆ.
ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ-ಆಧಾರಿತ ಭಾರತೀಯ ವೀಕ್ಷಣಾಲಯ ನೌಕೆಯ ಹಾರಾಟವನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಬೆಳಗ್ಗೆ 11:50 ಗಂಟೆಗೆ ನಿಗದಿಪಡಿಸಲಾಗಿದೆ.
https://lvg.shar.gov.in/VSCREGISTRATION/index.jsp ನಲ್ಲಿ ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಲಾಂಚ್ ಮಾಡುವುದನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ನೋಂದಣಿಯ ಪ್ರಾರಂಭವನ್ನು https://isro.gov.in/Aditya_L1.html ಅಲ್ಲಿ ಪ್ರಕಟಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಚಂದ್ರನ ಮೇಲ್ಮೈ ಮತ್ತು ವಿವಿಧ ಆಳಗಳಲ್ಲಿ ತಾಪಮಾನದಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಇಸ್ರೋದ ಪ್ರಗ್ಯಾನ್ ರೋವರ್ ಕಂಡುಕೊಂಡಿದೆ. ಈ ಶೋಧವು ಬಾಹ್ಯಾಕಾಶ ವಿಜ್ಞಾನದ ಚರಿತ್ರೆಯಲ್ಲಿಯೇ ಐತಿಹಾಸಿಕ ಬೆಳವಣಿಗೆಯಾಗಿದೆ.
ಹತ್ತು ಸೆಂ.ಮೀ.ವರೆಗೆ ಆಳಕ್ಕೆ ಪ್ರಗ್ಯಾನ್ ರೋವರ್‌ನಲ್ಲಿ ಅಳವಡಿಸಲಾಗಿರುವ ಚಂದ್ರಾಸ್ ಸರ್ಫೆಸ್ ಥರ್ಮೋಫಿಸಿಕಲ್ ಎಕ್ಸ್‌ಪರಿಮೆಂಟ್ ಸಲಕರಣೆಯು ಚಂದ್ರನ ದಕ್ಷಿಣ ಧ್ರುವದ ನೆಲದಲ್ಲಿ ಹತ್ತು ಸೆಂ.ಮೀ.ವರೆಗೆ ಆಳಕ್ಕೆ ರಂಧ್ರ ಕೊರೆದು ಪರೀಕ್ಷಿಸಿದೆ. ಅಷ್ಟು ಆಳ ಹಾಗೂ ಅದಕ್ಕೆ ಸಮೀಪದ ಸ್ತರಗಳಲ್ಲಿ ತಾಪಮಾನ ವ್ಯತ್ಯಾಸ ದೃಢಪಟ್ಟಿದೆ. ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅಧ್ಯಯನ ನಡೆಸಿದ ಬಳಿಕ ಸಮಗ್ರ ವಿವರ ನೀಡಲು ಸಾಧ್ಯ ಎಂದು ಇಸ್ರೋ ಹೇಳಿದೆ.