ಚಿಕನ್ ಲಿವರ್ ಪೆಪ್ಪರ್ ಫ್ರೈ – ಲಿವರ್ ಪ್ರಿಯರು ಟ್ರೈ ಮಾಡ್ಲೇಬೇಕಾದ ರೆಸಿಪಿ

ಶೇರ್ ಮಾಡಿ

ಚಿಕನ್ ಲಿವರ್ ಪೆಪ್ಪರ್ ಫ್ರೈ ಅತ್ಯಂತ ಜನಪ್ರಿಯ ಮಾತ್ರವಲ್ಲದೇ ಟೇಸ್ಟಿಯಾದ ನಾನ್‌ವೆಜ್ ರೆಸಿಪಿಗಳಲ್ಲಿ ಒಂದು. ಇದು ಯುರೋಪಿಯನ್, ಏಷ್ಯನ್ ಮತ್ತು ದಕ್ಷಿಣ ದೇಶಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ನಮ್ಮಲ್ಲಿ ಚಿಕನ್ ಖಾದ್ಯ ಏನಾದರೂ ಮಾಡಿದಾಗ ಲಿವರ್ ಹುಡುಕುವಂತಹವರೂ ಇದ್ದಾರೆ. ಅಂತಹ ಲಿವರ್ ಪ್ರಿಯರಿಗಾಗಿ, ನೀವೂ ಇದನ್ನು ಮನೆಯಲ್ಲಿ ಟ್ರೈ ಮಾಡಿ, ಚಪ್ಪರಿಸಿ ಸವಿಯಿರಿ.

ಬೇಕಾಗುವ ಪದಾರ್ಥಗಳು:
ಚಿಕನ್ ಲಿವರ್ _ 400 ಗ್ರಾಂ
ಹೆಚ್ಚಿದ ಈರುಳ್ಳಿ – 4
ಟೊಮೆಟೋ – 1
ಶುಂಠಿ ಪೇಸ್ಟ್ – 1 ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಜೀರಿಗೆ – ಕಾಲು ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ – 2 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧನಾ:

  • ಮೊದಲಿಗೆ ಚಿಕನ್ ಲಿವರ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಹರಿಸಿ.
  • ಅದಕ್ಕೆ ಅರಿಶಿನ ಪುಡಿಯನ್ನು ಚೆನ್ನಾಗಿ ಲೇಪಸಿ, ಸುಮಾರು 5-10 ನಿಮಿಷ ಪಕ್ಕಕ್ಕಿಡಿ.
  • ಒಂದು ಬಾಣಲೆಗೆ ಎಣ್ಣೆ ಹಾಕಿ, ಜೀರಿಗೆ ಹಾಗೂ ಈರುಳ್ಳಿ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ.
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಈರುಳ್ಳಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.
  • ನಂತರ ಚಿಕನ್ ಲಿವರ್ ಸೇರಿಸಿ ಹುರಿದುಕೊಳ್ಳಿ. ಲಿವರ್ ನೀರು ಬಿಡಲು ಪ್ರಾರಂಭಿಸುತ್ತದೆ. ನಂತರ ನೀರಿನಂಶ ಆವಿಯಾಗಲು ಬಿಡಿ. ಪ್ಯಾನ್ ಅನ್ನು ಮುಚ್ಚುವುದು ಬೇಡ.
  • ಲಿವರ್ ತುಂಡುಗಳ ಮೇಲೆ ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸಿಂಪಡಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಟೊಮೆಟೋವನ್ನು ಸೇರಿಸಿ, ಅದು ಬಿಡುವ ನೀರಿನಿಂದ ಲಿವರ್ ಅನ್ನು ಬೇಯಿಸಿಕೊಳ್ಳಿ.
  • ಬಳಿಕ ಉಪ್ಪು ಸೇರಿಸಿ, ಎಲ್ಲಾ ನೀರು ಆವಿಯಾಗುವವರೆಗೆ ಫ್ರೈ ಮಾಡುವುದನ್ನು ಮುಂದುವರಿಸಿ.
  • ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಲಿವರ್ ಪೆಪ್ಪರ್ ಫ್ರೈ ತಯಾರಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ಬಡಿಸಿ.

Leave a Reply

error: Content is protected !!