ಕುಂಟಾಲಪಳಿಕೆ: ಭಗವದ್ಗೀತಾ ಜಯಂತಿ ಮತ್ತು ವಿವೇಕ ಜಯಂತಿ ಆಚರಣೆ

ಶೇರ್ ಮಾಡಿ

ನೇಸರ ಜ.23: ಭಗವದ್ಗೀತೆಯು ಕೇವಲ ಕಂಠಪಾಠಕ್ಕೆ ಸೀಮಿತವಾಗದೆ ಅದರ ಮೌಲ್ಯ ಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸ್ಕೃತ ಅಧ್ಯಾಪಕ ಮತ್ತು ವೈದಿಕರಾದ ಅವಿನಾಶ್ ಗೋಖಲೆ ಯವರು ಹೇಳಿದರು.ಅವರು ಹತ್ಯಡ್ಕ ಗ್ರಾಮದ ಕುಂಟಾಲಪಳಿಕೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಪಿಲ ಕೇಸರಿ ಯುವಕ ಮಂಡಲ ಕುಂಟಾಲಪಳಿಕೆ ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿವೇಕ ಜಯಂತಿಯ ಪ್ರಯುಕ್ತ ಶಾಲಾ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವೇಕಾನಂದರ ಬಗ್ಗೆ ಭಾಷಣ ಸ್ಪರ್ಧೆ,ಭಗವದ್ಗೀತೆ ಕಂಠಪಾಠ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಸುಮಾರು 6 ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದರು.ಕುಂಟಾಲಪಳಿಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ.ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸ್ಪರ್ಧೆಯ ತೀರ್ಪುಗಾರರಾಗಿ ಶೈಲಜಾ ತುಳುಪುಳೆ,ಅವಿನಾಶ್ ಗೋಖಲೆ ಮತ್ತು ಉಷಾ.ವಿ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಗೌಡ, ಕಾರ್ಯದರ್ಶಿ ಸುಮಂತ ಗೌಡ ಅಳಕ್ಕೆ ಉಪಸ್ಥಿತರಿದ್ದರು.ಕೃತಿಕ್ ಭಟ್ ಸ್ವಾಗತಿಸಿ,ದೀಕ್ಷಿತ್ ಶೆಟ್ಟಿ ಮುದ್ದಿಗೆ ವಂದಿಸಿದರು.ಶ್ರೀವತ್ಸ ಗೋಖಲೆ ಮತ್ತು ವೃಕ್ಷವರ್ಧನ ಗೋಖಲೆ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು

Leave a Reply

error: Content is protected !!