ಬಂಟರ ಯಾನೆ ನಾಡವರ ಮಾತೃಸಂಘ(ರಿ.) ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇದರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇದರ ಅಶ್ರಯದಲ್ಲಿ “ಸೋಣದ ಪೊರ್ಲು 2023” ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ನೂತನ ಸಮಿತಿಗೆ ಪದಪ್ರಧಾನ ಸಮಾರಂಭವು ಸೆ.09ನೇ ಶನಿವಾರ ಕಲ್ಪವೃಕ್ಷ ಸಹಕಾರಿ ಸೌಧ ನೆಲ್ಯಾಡಿ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದ ಶೆಟ್ಟಿ ಮನವಳಿಕೆ ಅಧ್ಯಕ್ಷರು, ವಲಯ ಬಂಟರ ಸಂಘ ನೆಲ್ಯಾಡಿ ವಹಿಸಲಿದ್ದು, ವೇದಿಕೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷರು ಬಂಟರ ಸಂಘ(ರಿ) ಪುತ್ತೂರು, ಹರ್ಷ ಕುಮಾರ್ ರೈ ಜನ್ಮ ಫೌಂಡೇಷೇನ್ ಟ್ರಸ್ಟ್ (ರಿ), ವಿಜಯಲಕ್ಷ್ಮಿ ಪ್ರಸಾದ್ ರೈ ನಿಕಟಪೂರ್ವ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದಯಾನಂದ ರೈ ಮಾನವಳಿಕೆ ಗುತ್ತು ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ತಾಲೂಕು ಸಮಿತಿ, ಹೇಮನಾಥ್ ಶೆಟ್ಟಿ ಕಾವು ಉಪಾಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು, ಚಂದ್ರಹಾಸ ಶೆಟ್ಟಿ ಎನ್ ಅಧ್ಯಕ್ಷರು ಕೋಟಿ ಚೆನ್ನಯ್ಯ ಕಂಬಳ ಸಮಿತಿ ಪುತ್ತೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ವಜಾತಿಬಾಂಧವರು ಭಾಗವಹಿಸಿ ಸಂಘ ಬೆಳೆಸಲು ಸಹಕಾರ ನೀಡಬೇಕಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ ಅಧ್ಯಕ್ಷರು, ಕೆ.ಸತೀಶ್ ರೈ ಕೊಣಾಲು ಗುತ್ತು ಸಂಚಾಲಕರು, ವಾಣಿ ಎಸ್ ಶೆಟ್ಟಿ ಕಾರ್ಯದರ್ಶಿ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಖಜಾಂಜಿ, ಜಯಾನಂದ ಬಂಟ್ರಿಯಾಲ್ ಸಹಸಂಚಾಲಕರು, ಗುಡ್ಡಪ್ಪ ಶೆಟ್ಟಿ ಕಪಿಲ ಗೌರವಾಧ್ಯಕ್ಷರು ಮತ್ತು ಸರ್ವ ಸದಸ್ಯರು ವಲಯ ಬಂಟರ ಸಂಘ ನೆಲ್ಯಾಡಿ ವಿನಂತಿಸಿದರು.
ಸಂಘದ ನೂತನ ಪದಾಧಿಕಾರಿಗಳು:
ಸಂಚಾಲಕರಾಗಿ ಜಯಾನಂದ ಬಂಟ್ರಿಯಾಲ್, ಸಹ ಸಂಚಾಲಕರಾಗಿ ರತ್ನಾಕರ ಶೆಟ್ಟಿ ಅಶ್ವಮೇಧ, ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ, ಅಧ್ಯಕ್ಷರಾಗಿ ಪ್ರತಾಪ್ ಚಂದ್ರ ರೈ ಕುದ್ಮಾರು ಗುತ್ತು, ಕಾರ್ಯದರ್ಶಿಯಾಗಿ ಮಹಾಬಲ ಶೆಟ್ಟಿ ದೋಂತಿಲ, ಜೊತೆ ಕಾರ್ಯದರ್ಶಿಯಾಗಿ ಶೀಲಾ ಯಶೋಧರ್ ಶೆಟ್ಟಿ, ನಮಿತಾ ಸದಾನಂದ ಶೆಟ್ಟಿ, ಖಜಾಂಜಿಯಾಗಿ ಆನಂದ ಶೆಟ್ಟಿ ಕಂಚಿನಡ್ಕ, ಉಪಾಧ್ಯಕ್ಷರುಗಳಾಗಿ ಭಾಸ್ಕರ್ ರೈ ತೋಟ, ಪ್ರವೀಣ್ ಭಂಡಾರಿ ಪುರ, ಚಂದ್ರಶೇಖರ ರೈ ರಾಮನಗರ, ರಮೇಶ್ ಶೆಟ್ಟಿ ಬೀದಿಮನೆ, ಸದಸ್ಯರುಗಳಾಗಿ ಜಯಾನಂದ ಶೆಟ್ಟಿ ಇಚಿಲಂಪಾಡಿ, ಗಣೇಶ್ ಕಂಚಿನಡ್ಕ, ಜಯಾನಂದ ಶೆಟ್ಟಿ ಸೌಜನ್ಯ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು ಭಾಸ್ಕರ್ ಶೆಟ್ಟಿ ಸೂರ್ಯ ನಗರ, ಮೋಹನ್ ಶೆಟ್ಟಿ ದೋಂತಿಲ, ಶಾಂತರಾಮ ಶೆಟ್ಟಿ ಹೊಸಮಜಲು, ಚಂದ್ರಶೇಖರ್ ಶೆಟ್ಟಿ ಪಟ್ಟೆ, ಯಾದವ ಶೆಟ್ಟಿ ರಾಮನಗರ, ಅನಿಲ್ ರೈ ಹಾರ್ಪಳ, ಸುಭಾಷ್ ಶೆಟ್ಟಿ ಪುರ, ಹರೀಶ್ ಶೆಟ್ಟಿ ಗೋಳಿತೊಟ್ಟು, ಜೀವಿತಾ ಸಿ ಶೆಟ್ಟಿ, ಜಗನ್ನಾಥ ರೈ ಪಾದೆ ಮನೆ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ವಾಣಿ ಸದಾನಂದ ಶೆಟ್ಟಿ, ರಘುರಾಮ ಶೆಟ್ಟಿ ಕಡೆಂಬಿಲ, ಪದ್ಮನಾಭ ಶೆಟ್ಟಿ, ಆನಂದ ಶೆಟ್ಟಿ ಇವರುಗಳು 2023ರಿಂದ 2026 ರ ವರೆಗಿನ ನೂತನ ಸಮಿತಿಯ ಸದಸ್ಯರುಗಳಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.