7547 ಪೊಲೀಸ್‌ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಹಾಕಿ

ಶೇರ್ ಮಾಡಿ

ದೆಹಲಿ ಪೊಲೀಸ್‌ ಕಾನ್ಸ್‌ಟೇಬಲ್‌ (ಎಕ್ಸಿಕ್ಯೂಟಿವ್) ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗವು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಬರೋಬರಿ 7547 ಹುದ್ದೆಗಳಿಗೆ ಓಪನ್ ಕಾಂಪಿಟೇಟಿವ್ ಎಕ್ಸಾಮ್‌ ಮೂಲಕ ನೇಮಕ ಪ್ರಕ್ರಿಯೆ ನಡೆಸುತ್ತದೆ. ಈ ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್‌ ಅನ್ನು ಕೆಳಗಿನಂತೆ ತಿಳಿದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ
ಅಗತ್ಯ ವಿದ್ಯಾರ್ಹತೆ : 12ನೇ ತರಗತಿ / ದ್ವಿತೀಯ ಪಿಯುಸಿ ಪಾಸ್.
ವೇತನ ಶ್ರೇಣಿ : Rs.21,700-69100.

ಕೇಂದ್ರ ರೈಲ್ವೆಯಲ್ಲಿ 2409 ಹುದ್ದೆ ನೇಮಕ: ಯಾವುದೇ ಪರೀಕ್ಷೆ ಇರುವುದಿಲ್ಲ., ಇಂದಿನಿಂದಲೇ ಅರ್ಜಿ ಹಾಕಿ..
ವಯಸ್ಸಿನ ಅರ್ಹತೆ
ಅರ್ಜಿ ಸಲ್ಲಿಸಲು ದಿನಾಂಕ 01-07-2023 ಕ್ಕೆ ಕನಿಷ್ಠ 18-25 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಮೆಜರ್‌ಮೆಂಟ್‌ ಟೆಸ್ಟ್‌ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ http://ssc.nic.in ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆದು, ಅರ್ಜಿ ಸಲ್ಲಿಸಬೇಕು.

ಅಪ್ಲಿಕೇಶನ್‌ ಶುಲ್ಕ ರೂ.100.

Leave a Reply

error: Content is protected !!