ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ ವಲರ್ಮತಿ ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಇವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು.
ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕೌಂಟ್‌ಡೌನ್ ಘೋಷಣೆಯಾಗಿತ್ತು. ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಲರ್ಮತಿ ಯಾರು?
ವಲರ್ಮತಿ ಆರ್‌ಐಎಸ್‌ಎಟಿ-1ರ ಪಾಜೆಕ್ಟ್ ಡೈರೆಕ್ಟರ್ ಆಗಿದ್ದು, 2015ರಲ್ಲಿ ಸರ್ಕಾರ ನೀಡಿದ ಅಬ್ದುಲ್ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದರು. ವಲರ್ಮತಿ 1984ರಲ್ಲಿ ಇಸ್ರೋಗೆ ಸೇರಿದ್ದು, ಇನ್ಸಾಟ್ 2ಎ, ಐಆರ್‌ಎಸ್, ಐಸಿ, ಐಡಿ, ಟಿಇಎಸ್ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
The voice of Valarmathi Madam will not be there for the countdowns of future missions of ISRO from Sriharikotta. Chandrayan 3 was her final countdown announcement. An unexpected demise . Feel so sad.Pranams! pic.twitter.com/T9cMQkLU6J
— Dr. P V Venkitakrishnan (@DrPVVenkitakri1) September 3, 2023