ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡಿದರು ಮದುವೆಯ ಆಸೆ ಈಡೇರಿಸದ ಶಿವ; ಶಿವಲಿಂಗವನ್ನೇ ಕದ್ದ ಯುವಕ!

ಶೇರ್ ಮಾಡಿ

ತನ್ನ ಮದುವೆಯ ಆಸೆ ಈಡೇರಿಸಲಿಲ್ಲವೆಂದು ರೊಚ್ಚಿಗೆದ್ದ 27 ವರ್ಷದ ಯುವಕನೊಬ್ಬ ಶಿವಲಿಂಗವನ್ನೇ ಕದ್ದು ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.

ಭೈರೋ ಬಾಬಾ ದೇವಸ್ಥಾನದಿಂದ ಯುವಕ ಶಿವಲಿಂಗವನ್ನು ಕದ್ದೊಯ್ದಿದ್ದಾನೆ. ಇತ್ತ ಎಂದಿನಂತೆ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟಾಗ ಶಿವಲಿಂಗ ಇಲ್ಲದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶಿವಲಿಂಗ ನಾಪತ್ತೆಯಾಗಿರುವ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ಅಂತೆಯೇ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ಭಾನುವಾರ ಕುಮ್ಹಿಯಾವಾಹಾದಿಂದ ಆರೋಪಿ ಚೋಟು ಎಂಬಾತನನ್ನು ಬಂಧಿಸಿದ್ದಾರೆ.

ಯುವಕ ಕದ್ದ ಶಿವಲಿಂಗವನ್ನು ಬಿದಿರಿನ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದನು ಎಂದು ಮಹೇವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ರಜನಿಕಾಂತ್ ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲಿಗಟ್ಟಲಾಗಿದೆ.

ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಶಿವಲಿಂಗ ಕದಿಯಲು ಕಾರಣವೇನು ಎಂಬುದನ್ನು ರಿವೀಲ್ ಮಾಡಿದ್ದಾನೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ತಾನು ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದೆ. ಆದರೂ ಶಿವನು ನನ್ನ ಮದುವೆಯ ಆಸೆ ಈಡೇರಿಸಲಿಲ್ಲ. ಹೀಗಾಗಿ ನೊಂದು ಈ ಕೆಲಸ ಮಾಡಿದ್ದೆನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Leave a Reply

error: Content is protected !!