ಮೈಸೂರು ದಸರಾ ಅಂಬಾರಿ ಹೊರುವ ಅಭಿಮನ್ಯುವಿನ ತೂಕವೆಷ್ಟು ಗೊತ್ತ?

ಶೇರ್ ಮಾಡಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ರ ಪೂರ್ವಭಾವಿಯಾಗಿ ಅರಮನೆಯಲ್ಲಿ ಗಜಪಡೆಗಳು ಬೀಡು ಬಿಟ್ಟಿದ್ದು ಇಂದು ತೂಕ ಪರೀಕ್ಷೆ ನಡೆಸಲಾಯಿತು.

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ ಗಜಪಡೆ ಬಳಿಕ ತೂಕ ಮಾಪನ ಮಾಡಲಾಯಿತು. ಅದರಂತೆ ಅಭಿಮನ್ಯು, ಗೋಪಿ ಸೇರಿದಂತೆ ಒಟ್ಟು ಎಂಟು ಆನೆಗಳ ತೂಕ ಮಾಪನ ಮಾಡಲಾಯಿತು.

ಗಜಪಡೆಯ ಕ್ಯಾಪ್ಟನ್ ಎಂದೇ ಹೆಸರಾದ ಅಭಿಮನ್ಯು ಬರೋಬ್ಬರಿ 5,160 ಕೆಜಿ ತೂಗಿದೆ, ಅದರಂತೆ ಗೋಪಿ 5,080, ಧನಂಜಯ 4,940, ಮಹೇಂದ್ರ 4,530, ಭೀಮ 4,370, ಕಂಜನ್ 4,240, ವರಲಕ್ಷ್ಮಿ 3,020, ವಿಜಯ 2,830 ತೂಕ ಹೊಂದಿದೆ.

Leave a Reply

error: Content is protected !!