ಉದನೆ:ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ;ಗುರುವಂದನಾ ಕಾರ್ಯಕ್ರಮ

ಶೇರ್ ಮಾಡಿ

ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಹಾಗೂ ಸೈಂಟ್ ಆಂಟನೀಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭ ನಡೆಯಿತು‌.

ವಾದ್ಯ ಘೋಷಗಳೊಂದಿಗೆ,ವಿದ್ಯಾರ್ಥಿಗಳು ಶಿಕ್ಷಕವೃಂದವನ್ನು ಮೆರವಣಿಗೆಯಲ್ಲಿ ಕರೆತಂದು ಪುಷ್ಪಾರ್ಚನೆಗೈದು ವೇದಿಕೆಯಲ್ಲಿ ಆಸೀನಗೊಳಿಸಿದರು. ಸಂಸ್ಥೆಯ ಸಂಚಾಲಕರಾದ ರೆ‌.ಫಾ ಹನಿ ಜೇಕಬ್ ಇವರು ಎಲ್ಲಾ ಗುರುವೃಂದದವರನ್ನು, ಕಛೇರಿ ಸಿಬ್ಬಂದಿಯವರನ್ನು, ಚಾಲಕರನ್ನು, ಅಡುಗೆ ಸಹಾಯಕರನ್ನು ಶಾಲು ಹೊದಿಸಿ, ಕಾಣಿಕೆ ನೀಡಿ ಗೌರವಿಸಿದರು‌.

ವಿದ್ಯಾರ್ಥಿಗಳು ಶಿಕ್ಷಕರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟ ನಡೆಸಿ ಬಹುಮಾನ ವಿತರಿಸಿದರು .ಮಧ್ಯಾಹ್ನ ನಂತರ ಸಭಾ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಕಮಾಂಡರ್ ಇ.ಪಿ ಐಸಾಕ್ ಹಾಗೂ ಸಲೀಬಾ ಮ್ಯಾಥ್ಯೂ ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ಶಿವಪ್ರಸಾದ್ ಪುತ್ತಿಲ ಸಂಸ್ಥೆಯ ತ್ರೋಬಾಲ್ ಕ್ರೀಡಾಪಟುಗಳಿಗೆ 30000.00 ರೂ ವೆಚ್ಚದಲ್ಲಿ ಕ್ರೀಡಾ ಉಡುಪನ್ನು ಪ್ರಾಯೋಜಿಸಿ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು‌.

Leave a Reply

error: Content is protected !!