ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ- ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಯಾನ್ವಿತ ಎಂ.ಕೆ ತೃತೀಯ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮತ್ತು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇವರ ಸಹಯೋಗದಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳೆಕಟ್ಟೆಯಲ್ಲಿ ದಿನಾಂಕ 9.9.2023 ಶನಿವಾರದಂದು ಜರಗಿತು.

ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಂಬತ್ತನೆಯ ತರಗತಿಯ ವಿದ್ಯಾರ್ಥಿನಿ ಯಾನ್ವಿತ ಎಂ.ಕೆ ಅವರು ಪ್ರೌಢಶಾಲಾ ಹುಡುಗಿಯರ 36-40 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಮರ್ದಾಳದ ಕೋಲಂತಡಿಯ ಮಂಜುನಾಥ ಮತ್ತು ಶ್ರೀಮತಿ ಪದ್ಮಾವತಿ ಅವರ ಪುತ್ರಿಯಾಗಿದ್ದಾರೆ. ಇವರಿಗೆ ಕರಾಟೆ ಶಿಕ್ಷಕ ಯಾದವ್ ಬೀರಂತಡ್ಕ ಅವರು ತರಬೇತಿಯನ್ನು ನೀಡಿರುತ್ತಾರೆ

Leave a Reply

error: Content is protected !!