ರಸ್ತೆಯಲ್ಲಿ ಹೊಳೆಯಂತೆ ಹರಿದ ರೆಡ್ ವೈನ್ ವಿಡಿಯೋ ವೈರಲ್

ಶೇರ್ ಮಾಡಿ

ಭಾನುವಾರದಂದು ಪೋರ್ಚುಗಲ್‌ನ ಸಾವೊ ಲೌರೆಂಕೊ ಡಿ ಬಾರೊ ಸಣ್ಣ ಪಟ್ಟಣದ ಜನ ಕೆಲ ಹೊತ್ತು ಭೀತಿಗೆ ಒಳಗಾಗಿದ್ದರು ಜೊತೆಗೆ ಆಶ್ಚರ್ಯವೂ ಕಾದಿತ್ತು.

ನಗರದ ರಸ್ತೆ ತುಂಬೆಲ್ಲಾ ರಕ್ತದ ಬಣ್ಣವನ್ನು ಹೋಲುವ ಹೊಳೆಯೇ ಹರಿದಂತೆ ಭಾಸವಾಗಿತ್ತು ಇದನ್ನು ಕಂಡ ಅಲ್ಲಿಯ ಜನ ಒಂದು ಕ್ಷಣ ಭೀತಿಗೊಳಗಾಗಿದ್ದೂ ಹೌದು ಬಳಿಕ ಗೊತ್ತಯಿತು ಇದು ರಕ್ತವಲ್ಲ ರೆಡ್ ವೈನ್ ಎಂದು.

ಲಕ್ಷ ಲೀಟರ್ ರೆಡ್ ವೈನ್ ಸಾಗಿಸುವ ಬ್ಯಾರೆಲ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ನಗರದ ಪ್ರಮುಖ ರಸ್ತೆಗಳ ತುಂಬೆಲ್ಲಾ ರೆಡ್ ವೈನ್ ಹೊಳೆಯಂತೆ ಹರಿದಿದೆ ಹಾಗಾಗಿ ಮೊದಲು ಜನರಿಗೆ ಕೆಂಪು ಬಣ್ಣದ ನೀರು ಕಂಡು ಗಾಬರಿಗೊಂಡ ಜನಕ್ಕೆ ಬಳಿಕ ಇದು ರೆಡ್ ವೈನ್ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಹರಿದಾಡುತ್ತಿದ್ದು ಲಕ್ಷಾಂತರ ಲೀಟರ್ ವೈನ್ ಪೋಲಾಗಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದರ ಪ್ರಮಾಣ ಎಷ್ಟಿತೆಂದರೆ ಒಂದು ಒಲಂಪಿಕ್ ನ ಈಜುಕೊಳ ತುಂಬಲು ಎಷ್ಟು ನೀರು ಬೇಕಿತ್ತೋ ಅಷ್ಟು ಪ್ರಮಾಣದ ವೈನ್ ರಸ್ತೆ ಪಾಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಬ್ಯಾರೆಲ್ ಸ್ಪೋಟಗೊಂಡ ಕೂಡಲೇ ಲೆವಿರಾ ಡಿಸ್ಟಿಲರಿ ಕಂಪೆನಿ ಕ್ಷಮೆ ಯಾಚಿಸಿದ್ದು ಯಾವುದೇ ಕಾರಣಕ್ಕೂ ರೆಡ್ ವೈನ್ ನದಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದ್ದಾರೆ ಅದರಂತೆ ನದಿಗೆ ಹರಿಯುತಿದ್ದ ರೆಡ್ ವೈನ್ ಮಾರ್ಗವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಹೇಳಿದ್ದಾರೆ ಅಲ್ಲದೆ ವೈನ್ ನಗರದ ಕೆಲವು ಮನೆಗಳಿಗೆ ನುಗ್ಗಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗಿ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಕಂಪೆನಿ ಎಲ್ಲ ನಷ್ಟ ಭರಿಸುವ ಭರವಸೆ ನೀಡಿದೆ.

Leave a Reply

error: Content is protected !!