ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿದ ತನುಷ್ ಅಪ್ಪಯ್ಯ

ಶೇರ್ ಮಾಡಿ

ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ.

ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಇದೇ ತಿಂಗಳ 9 ರಂದು ತೇರ್ಗಡೆಯಾಗಿ ಲೆಫ್ಟಿನೆಂಟ್ ಪದವಿಯೊಂದಿಗೆ ಹೊರಹೊಮ್ಮಿರುವ ಕೊಳತೋಡು ಬೈಗೋಡು ಗ್ರಾಮದ ತನುಷ್ ಅಪ್ಪಯ್ಯ ಭವಿಷ್ಯದಲ್ಲಿ ಭಾರತೀಯ ಸೇನೆಯ ಉನ್ನತಾಧಿಕಾರಿಯಾಗಿ ಪದೋನ್ನತಿ ಪಡೆಯಲಿರುವ ಕೊಡಗಿನ ಸೇನಾಧಿಕಾರಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ(ಕಾಪ್ಸ್) ದ್ವಿತೀಯ ಪಿಯುಸಿ ವರೆಗೆ ವ್ಯಾಸಂಗ ಮಾಡಿರುವ ತನುಷ್, ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಲಹಾಬಾದ್ ನಲ್ಲಿ ಎಸ್.ಎಸ್.ಬಿ. ಪೂರ್ಣಗೊಳಿಸಿದ್ದ ತನುಷ್ ಅಪ್ಪಯ್ಯ, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 8ನೇ ಶ್ರೇರ್ಯಾಂಕ್ ಪಡೆದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಗೆ ಸೇರಿದ್ದರು.

ತನುಷ್ ಅಪ್ಪಯ್ಯ ಅವರು ಕೊಳತೋಡು ಭೈಗೋಡು ಗ್ರಾಮದ ಮುರುವಂಡ ಎ.ಬೋಪಣ್ಣ (ಮುತ್ತು) ಮತ್ತು ವಿನುತಾ (ತಾಮನೆ: ಬೊಜ್ಜಂಗಡ) ದಂಪತಿಯ ಪುತ್ರರಾಗಿದ್ದಾರೆ.

Leave a Reply

error: Content is protected !!