ನೆಲ್ಯಾಡಿ ಜೇಸಿಐ ಸಪ್ತಾಹ; ಆಶ್ರಮ ಭೇಟಿ ; ಹಣ್ಣು ಹಂಪಲು, ಸಿಹಿ ತಿಂಡಿ ವಿತರಣೆ

ಶೇರ್ ಮಾಡಿ

ನೆಲ್ಯಾಡಿ ಜೇಸಿಐ ನ ಜೇಸಿ ಸಪ್ತಾಹದ ಪ್ರಯುಕ್ತ ಸೆ.14ರಂದು ನೆಲ್ಯಾಡಿ ಕೊಪ್ಪದ ಪ್ರಶಾಂತಿ ಆಶ್ರಮನಿವಾಸಕ್ಕೆ ಭೇಟಿ ಹಣ್ಣು ಹಂಪಲು, ಸಿಹಿ ತಿಂಡಿ ವಿತರಣೆ ಹಾಗೂ ಮನರಂಜನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ದಯಾಕರ ರೈ.ಕೆ ವಹಿಸಿದರು, ಪೂರ್ವ ಅಧ್ಯಕ್ಷರಾದ ಜೇಸಿ ವೆಂಕಟರಮಣ ಆರ್, ಜೇಸಿ.ಹೆಚ್ ಜಿ ಎಫ್ ಜಾನ್ ಪಿ.ಎಸ್, ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಜಯಂತಿ ಬಿ ಎಂ, ಪ್ರಶಾಂತ ನಿವಾಸದ ನಿರ್ದೇಶಕಿ ಸಿಸ್ಟರ್ಸ್ ತೆರೇಸಾ, ಜೇಸಿಐನ ಕಾರ್ಯದರ್ಶಿ ಜೇಸಿ ಸುಚಿತ್ರ ಜೆ ಬಂಟ್ರಿಯಾಲ್, ಜೇಸಿ ಆನಂದ ಅಜಿಲ ಯೋಜನಾ ನಿರ್ದೇಶಕರಾದ ಜೇಸಿ ವಿನ್ಯಾಸ್ ಬಂಟ್ರಿಯಲ್ ಉಪಸ್ಥಿತರಿದ್ದರು.

ಜೇಸಿ.ದಯಾಕರ ರೈ.ಕೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಜೇಸಿ ಸುಚಿತ್ರ ಜೆ ಬಂಟ್ರಿಯಾಲ್ ವಂದಿಸಿದರು.

Leave a Reply

error: Content is protected !!