ನೆಲ್ಯಾಡಿ: ಜೇಸಿ ಸಪ್ತಾಹ- ಉದ್ಯಮ ದಿನ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಜೇಸಿ ಸಪ್ತಾಹದ ಐದನೇ ದಿನದ ಅಂಗವಾಗಿ ಉದ್ಯಮ ದಿನವನ್ನು ಆಚರಿಸಲಾಯಿತು.

ನೆಲ್ಯಾಡಿ ಜೆಸಿಐ ನ ಎಲ್ಲಾ ಉದ್ಯಮಿಗಳ ಪರವಾಗಿ ಜೇಸಿ ಸದಸ್ಯ ಮಿಥುನ್ ಜಿಎಸ್ ರವರ ಮಾಲಕತ್ವದ ಶಿವಕೃಪಾ ಆಯಿಲ್ ಮಿಲ್ ಗೆ ಭೇಟಿ ನೀಡಿ ಉದ್ದಿಮೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಯಿಲ್ ಮಿಲ್ ಗೆ ಸಂಬಂಧಿಸಿದ ಪ್ರಾತ್ಯಕ್ಷಿತೆಯನ್ನು ಮಾಲಕ ಮಿಥುನ್ ರವರು ನೀಡಿದರು, ಹಾಗೂ ಶ್ರೀಯುತರ ಜೊತೆ ಉದ್ಯಮಕ್ಕೆ ಸಂಬಂಧಿಸಿ ಸಂವಾದ ವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷರಾದ ಜೇಸಿ ಎಚ್‌ಜಿಎಫ್ ದಯಾಕರ ರೈ ಕೆ.ಎಂ ರವರು ವಹಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಎಚ್‌ಜಿಎಫ್ ಜಯಂತಿ, ಜೇಸಿ ಪೂರ್ವ ಅಧ್ಯಕ್ಷರುಗಳಾದ ಜೇಸಿ ಎಚ್‌ಜಿಎಫ್ ರವೀಂದ್ರ ಟಿ , ಜೇಸಿ ಎಚ್‌ಜಿಎಫ್ ಸದಾನಂದ ಕುಂದರ್, ಜೇಸಿ ಎಚ್‌ಜಿಎಫ್ ಜಯಾನಂದ ಬಂಟ್ರಿಯಾಲ್, ಜೇಸಿ ಎಚ್‌ಜಿಎಫ್ ಪುರಂದರ ಗೌಡ,ಜೇಸಿ ಎಚ್‌ಜಿಎಫ್ ದಯಾನಂದ ಆದರ್ಶ, ಜೇಸಿ ರಹಿಮಾನ್ ಹಾಗೂ ಸಪ್ತಾಹದ ಯೋಜನ ನಿರ್ದೇಶಕರಾದ ಜೇಸಿ ವಿನ್ಯಾಸ್ ಬಂಟ್ರಿಯಾಲ್ ಉಪಸ್ಥಿತರಿದ್ದರು.

Leave a Reply

error: Content is protected !!