ಮಂಗಳೂರು: ಸಂಚಾರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಆತ್ಮಹತ್ಯೆ

ಶೇರ್ ಮಾಡಿ

ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದ ಮಹೇಶ್ ಸವದತ್ತಿ(31) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆಯ ರೋಣದ ಮಹೇಶ್ ಸವದತ್ತಿ ಅವರು ಇಲ್ಲಿಯ ಕಪಿತಾನಿಯೊ ಬಳಿಯ ಸೈಮನ್ ಲೈನ್ ನಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಗುರುವಾರ ಮಧ್ಯಾಹ್ನ ಬಾಡಿಗೆ ಮನೆಯಲ್ಲಿ ಅವರ ದೇಹ ನೇಣು ಹಾಕಿ ಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. 2018ರಲ್ಲಿ ಪೋಲಿಸ್ ಇಲಾಖೆಗೆ ನೇಮಕಗೊಂಡಿದ್ದ ಅವರು, ಹಾಸನದಲ್ಲಿ ತರಬೇತಿ ಪಡೆದು 2019ರಲ್ಲಿ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು.

Leave a Reply

error: Content is protected !!