ಪುತ್ತೂರು:ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ಕ್ಷೇತ್ರಿಯ ಮಟ್ಟದ ಗಣಿತ-ವಿಜ್ಞಾನ ಮೇಳಕ್ಕೆ ಆಯ್ಕೆ

ಶೇರ್ ಮಾಡಿ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನ ಮೇಳವು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ – ಕಲಬುರುಗಿಯಲ್ಲಿ ಸೆ.1 ರಿಂದ ಸೆ.3ರ ವರೆಗೆ ನಡೆಯಿತು.

ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರುನ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜ್ಞಾನ ಮಾದರಿ ತಯಾರಿಯಲ್ಲಿ 8ನೇ ತರಗತಿಯ ಶಮನ್ ಎನ್(ನಿತ್ಯಾನಂದ.ಕೆ ಮತ್ತು ಶ್ರೀಮತಿ ಸಂಧ್ಯಾ.ಕೆ ಇವರ ಪುತ್ರ) ಪ್ರಥಮ ಸ್ಥಾನ ಹಾಗೂ 8ನೇ ತರಗತಿಯ ಪ್ರೀತಿ.ಪಿ.ಪ್ರಭು(ಪುಂಡಲೀಕ ಪ್ರಭು ಮತ್ತು ನಾಗಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ 8 ನೇ ತರಗತಿಯ ನಿರೀಕ್ಷಿತ್ ಹೆಗ್ಡೆ(ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ದಂಪತಿ ಪುತ್ರ), 8 ನೇ ತರಗತಿಯ ಗೌತಮಕೃಷ್ಣ( ಮಹೇಶ್ ಪ್ರಸನ್ನ.ಕೆ ಮತ್ತು ಶ್ರೀಲತಾ.ಎಂ ದಂಪತಿ ಪುತ್ರ) ಮತ್ತು 7 ನೇ ತರಗತಿಯ ಶುಭನ್(ಪದ್ಮನಾಭ.ಕೆ ಮತ್ತು ರೇಖಾ.ಪಿ.ನಾಯ್ಕ ದಂಪತಿ ಪುತ್ರ) ಈ 3 ವಿದ್ಯಾರ್ಥಿಗಳ ತಂಡ – ತೃತಿಯ ಸ್ಥಾನ ಪಡೆದು ಪ್ರಾಂತೀಯ ಮಟ್ಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

Leave a Reply

error: Content is protected !!