ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

ಶೇರ್ ಮಾಡಿ

ಸುಳ್ಯ : ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಇಂಜಿನಿಯರ್ಸ್ ದಿನಾಚರಣೆ ಹಾಗೂ ಪ್ರಾಜಾ ಪ್ರಭುತ್ವ ದಿನಾಚರಣೆ ಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ಉಪ ಪ್ರಾಂಶುಪಾಲ ಎಂ.ಕೆ ಶ್ರೀಧರ್ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಹಾರೈಸಿದರು.

ಅಕಾಡೆಮಿಕ್ ಡೀನ್ ಎಮ.ಎನ್.ಚಂದ್ರಶೇಖರ್ ಸರ್ ಎಂ.ವಿಶ್ವೇಶ್ವರಯ್ಯನವರ ಜೀವನ, ಆದರ್ಶಗಳ ಬಗ್ಗೆ ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ತಾಜುದ್ದೀನ್, ಕಾರ್ಯದರ್ಶಿ ಚರಣ್ ರಾಜ್, ಎನ್ನೆಸ್ಸೆಸ್ ಘಟಕ ನಾಯಕರಾದ ದರ್ಶನ್ ಎಂ.ಪಿ, ರಾಜೇಶ್ ಬಿ, ರಕ್ಷಿತಾ ಡಿ.ಎ, ಜೇಷ್ಮಾ ಎಸ್.ಬಿ, ರೆಡ್ ಕ್ರಾಸ್ ಘಟಕದ ನಾಯಕರಾದ ಲಿಖಿತ್ ಎಸ್.ಆರ್ ಮತ್ತು ತೇಜಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಯಂ ಸೇವಕಿ ವೈಶಾಲಿ ಸ್ವಾಗತಿಸಿ ರಕ್ಷಿತಾ ವಂದಿಸಿದರು. ನಾಯಕಿ ಜೇಷ್ಮಾ ಎಸ್.ಬಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ವಿಶ್ವೇಶ್ವರಯ್ಯನವರ ಬಗ್ಗೆ ರಸಪ್ರಶ್ನೆ ನಡೆಸಿ ಬಹುಮಾನ ನೀಡಲಾಯಿತು.

Leave a Reply

error: Content is protected !!