ಪಟ್ಟೂರು: ಕೋಳಿ ಅಂಕಕ್ಕೆ ದಾಳಿ; 8 ಮಂದಿಯನ್ನು ವಶಕ್ಕೆ ಪಡೆದ ಧರ್ಮಸ್ಥಳ ಪೊಲೀಸರು

ಶೇರ್ ಮಾಡಿ

ಪಟ್ಟೂರು: ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪಟ್ಟೂರು ವಲಸರಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ, ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಿಂದ ದಾಳಿ.

ನಗದು ರೂಪಾಯಿ 2,350/-, 4 ಹುಂಜ ಕೋಳಿಗಳು, 2 ಕೋಳಿ ಬಾಲುಗಳು, ಒಂದು ಓಮಿನಿ ಕಾರು, ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ಕೋಳಿ ಅಂಕದಲ್ಲಿ ನಿರತರಾಗಿದ್ದ ಸತೀಶ, ಜಿತೇಂದ್ರ, ಶೀನ ಮುಗೇರ, ಅಣ್ಣು, ಶ್ರೀಧರ, ಮನೋಜ ಕುಮಾರ್‌, ಸತೀಶ್‌, ಸುಧಾಕರ 8 ಮಂದಿಯನ್ನು ವಶಕ್ಕೆ ಪಡೆದುಕೊಂಡು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 68/2023 ಕಲಂ: 87 ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

error: Content is protected !!