ಕೊಕ್ಕಡ: ಯಕ್ಷಗಾನ ನಾಟ್ಯ ತರಬೇತಿ ತರಗತಿ ಉದ್ಘಾಟನೆ

ಶೇರ್ ಮಾಡಿ

ಕೊಕ್ಕಡ: ವೈದ್ಯನಾಥೇಶ್ವರ ಯಕ್ಷಗಾನ ನಾಟ್ಯ ಕಲಾ ಕೇಂದ್ರದ ವತಿಯಿಂದ ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿಯನ್ನು ಸೆ.17ರಂದು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ, ನಾರಾಯಣ ಶೆಟ್ಟಿ ಕುಂಡಡ್ಕ ಹಿರಿಯ ಭಾಗವತರು, ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷರು ಶ್ರೀರಾಮ ಸೇವಾ ಟ್ರಸ್ಟ್, ಈಶ್ವರ ಭಟ್ ಹಿತ್ತಿಲು ಮನೆ ಶ್ರೀರಾಮ ಸೇವಾ ಟ್ರಸ್ಟ್, ಬಾಲಕೃಷ್ಣ ನೈಮಿಷ ನೈಮಿಷ ಹೌಸ್ ಆಫ್ ಸ್ಪೈಸಸ್, ಡಾ.ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ನಾಟ್ಯ ಗುರುಗಳಾದ ಸುಂದರ ಗೌಡ ಮುಳಿತ್ತಡ್ಕ ಉಪಸ್ಥಿತರಿದ್ದರು.

ಅಕ್ಷಯ್ ಕುಮಾರ್ ಸ್ವಾಗತಿಸಿದರು, ಕೇಂದ್ರದ ಮೇಲ್ವಿಚಾರಕ ರಂಜಿತ್ ಕುಲಾಲ್ ನಿರೂಪಿಸಿದರು, ಕೇಂದ್ರದ ನಾಟ್ಯ ಗುರು ಸುಂದರ ಗೌಡ ಮುಳಿತ್ತಡ್ಕ ವಂದಿಸಿದರು.

Leave a Reply

error: Content is protected !!